ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪದಲ್ಲಿ ಅರ್ಥವಿಲ್ಲ-ಬಿಎಸ್‍ವೈ


28-03-2019 215

ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪದಲ್ಲಿ ಅರ್ಥವಿಲ್ಲ. ಪ್ರಾಮಾಣಿಕವಾಗಿ ಅವರು ಅವರ ಕೆಲಸವನ್ನು ಮಾಡುತ್ತಾರೆ. ಅನುಮಾನ ಬಂದಾಗ ಐಟಿ ದಾಳಿ ಸಹಜ ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳ ಮನೆ ಮೇಲೆ ನಡೆದ ಐಟಿ ದಾಳಿ ಬಗ್ಗೆ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಅವರು, ಐಟಿ ಅಧಿಕಾರಿಗಳಿಗೆ ಅನುಮಾನ ಬಂದ್ರೆ ಅವರೇ ನೇರವಾಗಿ ದಾಳಿ ಮಾಡಿ ತನಿಖೆ ಮಾಡುತ್ತಾರೆ. ಇವರು ಪ್ರಾಮಾಣಿಕರಿದ್ದರೆ ಇವರಿಗೇಕೆ ಭಯ? ನಿನ್ನೆ ಸಿಎಂ ಕುಮಾರಸ್ವಾಮಿ ಹೇಳಿದ್ದನ್ನು ಕೇಳಿದೆ. ನಿನ್ನೆ ರಾತ್ರಿಯೇ ಅವರಿಗೆ ಐಟಿ ದಾಳಿಯ ಮಾಹಿತಿ ಇತ್ತು ಅನ್ನೋದಾದರೆ ಅವರು ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನವಿದೆ. ಸುಖಾಸುಮ್ಮನೆ ಸಿಬಿಐ, ಐಟಿ ಮೇಲೆ ಆರೋಪ ಮಾಡೋದು ಒಂದು ಖಯಾಲಿ ಆಗಿಬಿಟ್ಟಿದೆ. ಅಲ್ಲದೇ ಐಟಿ ದಾಳಿಗೆ ಸುಮಲತಾ ಅಂಬರೀಶ್ ಕಾರಣ ಎಂಬ ಹೇಳಿಕೆ ನೀಡಿದ ಪುಟ್ಟರಾಜುಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #It Raid #Bsy #Jds