ಏಪ್ರಿಲ್‍ನಲ್ಲಿ ನಿಮ್ಮ ಮುಂದೆ ರಾಧಿಕಾ ಕುಮಾರಸ್ವಾಮಿ 


27-03-2019 851

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸರಿಯಾಗಿ ಲೋಕಸಭಾ ಚುನಾವಣೆ ವೇಳೆಯಲ್ಲೇ ರಾಧಿಕಾ ಕುಮಾರಸ್ವಾಮಿ ಕೂಡ ಸುದ್ದಿಯಲ್ಲಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸುದ್ದಿಯಾಗಿರೋದು ಮತ್ಯಾವುದೇ ಕಾರಣಕ್ಕಲ್ಲ ತಮ್ಮ ಚಿತ್ರ ಬಿಡುಗಡೆಯ ಕಾರಣಕ್ಕಾಗಿ. ಹೌದು ನಾಲ್ಕು ವರ್ಷಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಕಾಂಟ್ರಾಕ್ಟ್ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. 

ಮೊನ್ನೆ ಮೊನ್ನೆ ತಮ್ಮ ಪ್ರೊಡಕ್ಷನ್‍ನ ಬಹುನೀರಿಕ್ಷಿತ ಚಿತ್ರ ರುದ್ರತಾಂಡವ ಶೂಟಿಂಗ ವೇಳೆ ಗೋರಿ ಮೇಲೆ ಬಿದ್ದು ಗಾಯಗೊಂಡಿದ್ದ ರಾಧಿಕಾ ಚೇತರಿಸಿಕೊಂಡಿದ್ದಾರೆ. ಇದರ ಜೊತೆಗೆ ಸಧ್ಯದಲ್ಲೇ ಕಾಂಟ್ರಾಕ್ಟ್ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ತೆರೆಗೆ ಬರಲಿದ್ದಾರೆ. 

ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರ ಏಪ್ರಿಲ್‍ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಾಧಿಕಾ ಕುಮಾರಸ್ವಾಮಿ, ನಟ ಅರ್ಜುನ್ ಸರ್ಜಾಗೆ ಜೋಡಿಯಾಗಿದ್ದಾರೆ. ಸಿನಿಮಾದಲ್ಲಿ ಅರ್ಜುನ್ ಸರ್ಜಾ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೇ, ರಾಧಿಕಾ ಔಟ್ ಆಂಡ್ ಟೌಟ್ ಗ್ಲ್ಯಾಮರ್ ಪಾತ್ರದಲ್ಲಿ ಮಿಂಚಿದ್ದಾರೆ. ಸಮೀರ್ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರದಲ್ಲಿ  ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಇತಿ ಆಚಾರ್ಯ, ದುಬೈ ರಫೀಕ್ ಸೇರಿದಂತೆ ಹಲವು ಕಲಾವಿದರಿದ್ದಾರೆ. 
 ಹಾಡುಗಳ ಚಿತ್ರೀಕರಣ ಸೇರಿದಂತೆ ಚಿತ್ರದ ಎಲ್ಲ ಕೆಲಸಗಳು ಮುಕ್ತಾಯವಾಗಿದ್ದು, ಈ ಚಿತ್ರ ಒಂದೆ ಬಾರಿಗೆ ಕನ್ನಡ, ತಮಿಳು ಹಾಗೂ ತೆಲುಗಿನಲ್ಲೂ ತೆರೆಗೆ ಬರಲಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#April #Radhika Kumarswamy #Movie #Role