ಜೆಟ್ ಏರ್ ವೇಸ್‍ನ ಅಂತಾರಾಷ್ಟ್ರೀಯ ಮಾರ್ಗದ ಹಾರಾಟ ರದ್ದು


23-03-2019 267

ಈಗಾಗಲೆ ಆರ್ಥಿಕ ಸಂಕಷ್ಟದಿಂದ ಸಿಬ್ಬಂದಿಗೆ ಸಂಬಳ ಪಾವತಿಸಲಾಗದ ಸ್ಥಿತಿಯಲ್ಲಿರುವ ಜೆಟ್ ಏರ್‍ವೇಸ್ ಈಗ ಮತ್ತಷ್ಟು ಅಂತಾರಾಷ್ಟ್ರೀಯ ಹಾರಾಟಗಳನ್ನು ರದ್ದುಗೊಳಿಸಿದ್ದು, ಮತ್ತಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ.

ಹೌದು ಕೆಲ ಕಾರಣಗಳಿಂದ ಏಪ್ರಿಲ್ ಅಂತ್ಯದವರೆಗೆ 13 ಅಂತಾರಾಷ್ಟ್ರೀಯ ಮಾರ್ಗಗಳಿಗೆ ಹಾರಾಟ ನಡೆಸುವುದಿಲ್ಲ ಎಂದು ಜೆಟ್ ಏರ್‍ವೇಸ್ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ  ದೆಹಲಿ ಟೂ ಮುಂಬಯಿ ಮಾರ್ಗದ ವಿಮಾನಗಳ ಹಾರಾಟದ ಅಂತರವನ್ನು ಕೂಡ ಕಡಿಮೆ ಮಾಡಿದೆ. 
 
ಇನ್ನು ವೇತನ ಪಾವತಿ ಮಾಡದ ಕಾರಣಕ್ಕೆ ಜೆಟ್‍ಲೈಟ್‍ನ ಎರಡು ವಿಮಾನ ಸೇರಿ ಏಳು ವಿಮಾನಗಳ ಹಾರಾಟವೂ ಕೂಡ ಶುಕ್ರವಾರಕ್ಕೆ ಸ್ಥಗಿತಗೊಂಡಿದೆ. ದೆಹಲಿಯಿಂದ ಅಬುಧಾಬಿಗೆ ಒಂದು ವಾರಕ್ಕೆ 9 ವಿಮಾನ, ಡಾಕಾ, ಹಾಂಗ್‍ಕಾಂಗ್ ಹಾಗೂ ರಿಯಾದ್‍ಗೆ ವಾರಕ್ಕೆ ಏಳು ವಿಮಾನಗಳ ಹಾರಾಟ ನಡೆಯುತ್ತಾದರೂ ಅದನ್ನು ಈಗ ನಿಲ್ಲಿಸಲಾಗಿದೆ. ಬೆಂಗಳೂರು-ಸಿಂಗಾಪುರ ಮಾರ್ಗದಲ್ಲಿ ದಿನಕ್ಕೆ ಎರಡು ಬಾರಿ ಹಾರಾಟ ಮಾಡುತ್ತಿದ್ದ ವಿಮಾನ ಸಂಚಾರವನ್ನು ಈಗ ಸ್ಥಗಿತಗೊಳಿಸಲಾಗಿದೆ.
 
ದೆಹಲಿ, ಮುಂಬೈ,ಕಟ್ಮಂಡು,ಬ್ಯಾಂಗ್‍ಕಾಕ್,ದೋಹಾ,ಕುವೈತ್,ಸಿಂಗಾಪುರಕ್ಕೆ ತೆರಳುವ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಜೆಟ್ ಏರ್‍ವೇಸ್‍ನಲ್ಲಿ ಒಟ್ಟು 23 ಸಾವಿರ ಜನರು ಕೆಲಸ ಮಾಡುತ್ತಿದ್ದು, ಅವರು ಹಲವು ತಿಂಗಳಿನಿಂದ ವೇತನವಿಲ್ಲದೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
 
ಇನ್ನು ಸಧ್ಯದ ಪರಿಸ್ಥಿತಿಯಲ್ಲಿ ಜೆಟ್ ಏರವೆಸ್ ತನ್ನ ವಿಮಾನಗಳನ್ನು ಉಳಿಸಿಕೊಳ್ಳುವ ಅಥವಾ ನಿರ್ವಹಿಸುವ ಸ್ಥಿತಿಯಲ್ಲೂ ಇಲ್ಲವಾಗಿದ್ದು, ಹೀಗಾಗಿ ಸ್ಪ್ರೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ತನ್ನ ಅಂದಾಜು 40 ವಿಮಾನಗಳನ್ನು ಖರೀದಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಜೆಟ್ ಏರ್‍ವೇಸ್ ಈ ಸ್ಥಿತಿಯಿಂದ ಸಿಬ್ಬಂದಿಗಳು ಕಂಗಾಲಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

# Jet Airways #International #flight canceled #loss