ಹೈಕಮಾಂಡ್ ಕಪ್ಪ ಪ್ರಕರಣ ಲೋಕಪಾಲ್ ತನಿಖೆಗೆ ನೀಡಿ - ಕಾಂಗ್ರೆಸ್ 


22-03-2019 246

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಹೈಕಮಾಂಡ್‍ಗೆ ಕಪ್ಪ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ದಿ.ಅನಂತಕುಮಾರ್ ನಡುವಿನ ಸಿಡಿ ಪ್ರಕರಣಕ್ಕೆ ಕಾಂಗ್ರೆಸ್ ಮರುಜೀವ ನೀಡಿದ್ದು, ಈ ಪ್ರಕರಣದ ತನಿಖೆಯನ್ನು ಲೋಕಪಾಲ ಸಂಸ್ಥೆ ನಡೆಸಲಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್ ಸವಾಲು ಹಾಕಿದ್ದಾರೆ. 

ಹೈಕಮಾಂಡ್ ಕಪ್ಪ ವಿಚಾರಕ್ಕೆ ಸಂಬಂಧಿಸಿದಂತೆ  ಬಿಎಸ್‍ವೈಯವರಿಂದ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ. ಆದರೆ ಪ್ರಯೋಜನವಾಗಿಲ್ಲ. ಆ ಡೈರಿಯಲ್ಲಿ ಪ್ರತಿ ನಾಯಕನ ಹೆಸರು ನೀಡಲಾದ ಹಣದ ಮೊತ್ತವನ್ನು ಉಲ್ಲೇಖಿಸಲಾಗಿದೆ.  ಕೇಂದ್ರ ತನಿಖಾ ತಂಡ ಈ ಡೈರಿಯನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡು ಕೂತಿದೆಯೇ ವಿನಃ ಯಾವುದೆ ಕ್ರಮವಾಗಿಲ್ಲ. 2017ರಿಂದಲೂ ಈ ಡೈರಿ ತನಿಖಾ ಸಂಸ್ಥೆಗಳ ಬಳಿಯೇ ಇದ್ದರೂ ಯಾಕೆ ತನಿಖೆಯಾಗಿಲ್ಲ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕೆಂದು ಒತ್ತಾಯಿಸಿದ್ದಾರೆ. 

 ಕಾರವಾನ್ ಎಕ್ಸಪ್ರೆಸ್ ವರದಿ ಆಧರಿಸಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೆವಾಲಾ, ಯಡಿಯೂರಪ್ಪನವರ  ಡೈರಿಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿದೆ. ಒಟ್ಟು 2690 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಹಾಗೂ 1800 ಕೋಟಿ ರೂಪಾಯಿ ಹೈಕಮಾಂಡಿಗೆ  ನೀಡಿದ್ದು ಉಲ್ಲೇಖವಿದೆ ಎಂದು ಆರೋಪಿಸಿದ್ದಾರೆ.  
ಇನ್ನು ಈ ಪ್ರಕರಣದ ತನಿಖೆಯನ್ನು ಲೋಕ್‍ಪಾಲ್ ಸಂಸ್ಥೆಗೆ ನೀಡಿ ಮೋದಿ ಚೌಕಿದಾರ್ ಚೋರ್ ಅಲ್ಲ ಎಂಬುದನ್ನು ಸಾಬೀತುಪಡಿಸಲಿ ಎಂದರು. ಅಲ್ಲದೆ ಈ ಬಗ್ಗೆ ಸ್ವತಃ ದಿ. ಅನಂತಕುಮಾರ್ ಹಾಗೂ ಬಿಎಸ್‍ವೈ  ಮಾತನಾಡಿರುವ ಆಡಿಯೋ ಕೂಡ ಇದ್ದು ಅದನ್ನು ಒಮ್ಮೆ ಬಿಡುಗಡೆ ಮಾಡಲಾಗಿದೆ ಎಂದರು. 

ಇದೀಗ ರಾಜ್ಯ ಬಿಜೆಪಿಯ ನೇತೃತ್ವದ ಜೊತೆಗೆ ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತಿರೋದರಿಂದ ಈ ಪ್ರಕರಣವನ್ನು ಎತ್ತಂಗಡಿ ಮಾಡಿ ಜನರ ಎದುರು ಬಿಜೆಪಿ ಹಗರಣವನ್ನು ಬಿಟ್ಟುಕೊಡುವ ಪ್ಲ್ಯಾನ್ ಕಾಂಗ್ರೆಸ್‍ಗೆ ಇದ್ದಂಗಿದ್ದು, ಇದೇ ಕಾರಣಕ್ಕೆ ಮತ್ತೀಗ 2 ವರ್ಷದ ಹಳೆ ಪ್ರಕರಣಕ್ಕೆ ಕೈಪಾಳಯ ಜೀವ ತುಂಬುವ ಕೆಲಸ ಮಾಡುತ್ತಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#High Command #Congress # Lokpal #Bjp