ಕಾಂಗ್ರೆಸ್ನಿಂದ ಕಣಕ್ಕಿಳಿತಾರಾ ಶತ್ರುಘ್ನ ಸಿನ್ಹಾ?

ಬಿಜೆಪಿ ಸಂಸದರಾಗಿದ್ದುಕೊಂಡೇ ಮೋದಿಯನ್ನು ಸದಾಕಾಲ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ಗಳ ಮೂಲಕ ಟೀಕಿಸುತ್ತಿದ್ದ ಸಂಸದ ಶತ್ರುಘ್ನ ಸಿನ್ಹಾ ಸಾಹಿಬ್ ಕ್ಷೇತ್ರದಿಂದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ ದೊರೆತಿದೆ.
ಸಧ್ಯದಲ್ಲೇ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಗೆ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಲೋಕದಿಂದ ಬಂದ ಶತ್ರುಘ್ನಾ ಸಿನ್ಹಾ, ಬಿಹಾರದ ಪಾಟ್ನಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಶತ್ರುಘ್ನ ಸಿನ್ಹಾ ತಮ್ಮ ಪ್ರತಿಸ್ಪರ್ಧಿಯಿಂದ ಅಂದಾಜು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಗೆಲುವು ಸಾಧಿಸಿ ಸಂಸದರಾದಾಗಿನಿಂದಲೂ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿದ್ದಾರೆ.
ಮೋದಿಯವರು ಹಲವು ಪಕ್ಷಗಳ ನೆರವಿನಿಂದ ಅಧಿಕಾರ ಸ್ಥಾಪಿಸಿರುವುದು, ಹಿಂದಿನ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸದಿರುವುದು ಸೇರಿದಂತೆ ಹಲವು ವಿಚಾರಗಳಿಗಾಗಿ ಶತ್ರುಘ್ನ ಸಿನ್ಹಾ ಮೋದಿಯವರನ್ನು ಟೀಕಿಸುತ್ತಲೆ ಬಂದಿದ್ದಾರೆ. ಹೀಗಾಗಿ ಈ ಬಾರಿ ಸಿನ್ಹಾ ಕಾಂಗ್ರೆಸ್ ಸೇರಿ ಅಲ್ಲಿಂದ ಲೋಕಸಭೆಗೆ ಸ್ಪರ್ಧಿಸೋದು ಖಚಿತ ಎನ್ನಲಾಗುತ್ತಿದೆ.
ಒಂದೊಮ್ಮೆ ಶತ್ರುಘ್ನ ಸಿನ್ಹಾ ಕಾಂಗ್ರೆಸ್ನಿಂದ ಕಣಕ್ಕಿಳಿಯೋದು ನಿಜವಾದಲ್ಲಿ, ಬಿಜೆಪಿಯಿಂದ ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿ ಬಿಹಾರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಬಿಜೆಪಿಯಿಂದ ಶತ್ರುಘ್ನ ಸಿನ್ಹಾ ಗೆ ಎದುರಾಳಿಯಾಗುವ ಸಾಧ್ಯತೆ ಇದೆ.
ಅಲ್ಲದೇ ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಕೀರ್ತಿ ಆಜಾದ್ ಕೂಡ ಇದೆ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಗಳಾಗಿದ್ದು, ಹೀಗಾಗಿ ಕಾಂಗ್ರೆಸ್ನಲ್ಲೂ ಟಿಕೇಟ್ ಫೈಟ್ಇದೆ. ಒಟ್ಟಿನಲ್ಲಿ ದೇಶದ ಎಲ್ಲೆಡೆ ಟಿಕೇಟ್ಗಾಗಿ ಸಾಕಷ್ಟು ಫೈಟ್ ಆರಂಭವಾಗಿದ್ದು, ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿಯನ್ನು ಟೀಕಿಸಿದ ಶತ್ರುಘ್ನ ಸಿನ್ಹಾ ಪಕ್ಷದಿಂದ ಹೊರಬರುತ್ತಾರಾ? ಹೊರಬಂದು ಟಿಕೇಟ್ ಗಿಟ್ಟಿಸಿಕೊಳ್ತಾರಾ ಕಾದು ನೋಡಬೇಕಿದೆ.
ಒಂದು ಕಮೆಂಟನ್ನು ಬಿಡಿ