ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಜಾಮೀನು ರಹಿತ ವಾರೆಂಟ್


18-03-2019 205

ಚುನಾವಣೆ ಮಾದರಿ ನೀತಿ ಸಂಹಿಂತೆ ಉಲ್ಲಂಘನೆ ಆರೋಪ ಸಂಬಂಧ ವಿಚಾರಣೆಗೆ ಹಲವು‌ ಬಾರಿ ಗೈರು ಹಾಜರಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದೆ‌.
ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರೂ ಮಾಜಿ ಸಚಿವ ರೇಣುಕಾಚಾರ್ಯ ಗೈರು ಹಿನ್ನೆಲೆಯಲ್ಲಿ ನ್ಯಾ. ರಾಮಚಂದ್ರ ಡಿ. ಹುದ್ದರ್ ಎರಡನೇ ಬಾರಿ ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #Warrant #Renukachraya # Former minister