ಚೌಕಿದಾರ್ ಬೇಕಿರುವುದು ಶ್ರೀಮಂತರಿಗೆ ಬಡವರಿಗಲ್ಲ- ಪ್ರಿಯಾಂಕಾ ವಾದ್ರಾ 


18-03-2019 278

ಗಂಗಾ ಯಾತ್ರೆಯ ಮೂಲಕ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಿಯಾಂಕಾ ವಾದ್ರಾ ಗಂಗಾ ನದಿ ನೀರನ್ನು ಕುಡಿಯುವ ಮೂಲಕ ತಮ್ಮ ಪ್ರಚಾರ ಆರಂಭಿಸಿದ್ದು, ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿಯವರ ಚೌಕಿದಾರ ಅಭಿಯಾನಕ್ಕೆ ಟಾಂಗ್ ನೀಡಿದ್ದಾರೆ. 

ತಮ್ಮ ಹೆಸರಿನ ಮುಂದೆ ಏನು ಸೇರಿಸಬೇಕೆಂಬುದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಆದರೆ ಮೋದಿ ತಮ್ಮನ್ನು ತಾವು ಚೌಕಿದಾರ್ ಎನ್ನುತ್ತಿದ್ದಾರೆ. ಚೌಕಿದಾರ್ ಬೇಕಾಗಿರುವುದು ಶ್ರೀಮಂತರಿಗೆ. ರೈತರು, ಬಡವರಿಗಲ್ಲ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ. 
 
ಗಂಗಾ ನದಿ ತಟದಲ್ಲಿರುವ ಜನರೊಂದಿಗೆ ಸಂವಾದ ನಡೆಸಿ, ಮತಯಾಚಿಸುವ ನಿರ್ಧಾರಕೈಗೊಂಡಿರುವ ಕಾಂಗ್ರೆಸ್ ಉತ್ತರ ಪ್ರದೇಶ ಪೂರ್ವವಲಯ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಇದಕ್ಕಾಗಿ ಮೂರು ದಿನಗಳ ಕಾಲ ಗಂಗಾ ನದಿಯಲ್ಲಿ  ಸುಮಾರು 140 ಕಿಲೋಮೀಟರ್ ದೋಣಿಯಾನ ನಡೆಸಲಿದ್ದಾರೆ. ಪ್ರಯಾಗ್ ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲೂ ಈ ದೋಣಿಯಾನ ನಡೆಯಲಿದೆ. 

ಇಂದು ಗಂಗಾಯಾತ್ರೆ ಆರಂಭಿಸಿದ ಪ್ರಿಯಾಂಕಾ ಕಾರ್ಯಕರ್ತರೊಂದಿಗೆ ಮಾತುಕತೆ, ಸಂವಾದ ನಡೆಸಿದರು. ಬಳಿಕ ಭಾಷಣದಲ್ಲಿ ಮೋದಿ ವಿರುದ್ಧ ಟೀಕಾಸ್ತ್ರಪ್ರಯೋಗಿಸುವುದನ್ನು ಮರೆಯಲಿಲ್ಲ. ಯಾತ್ರೆಗೂ ಮುನ್ನ ಪ್ರಿಯಾಂಕಾ ವಾದ್ರಾ, ಬಡೇ ಹನುಮಾನ ದೇವಾಲಯ ಮತ್ತು ಪ್ರಯಾಗ್ ರಾಜ್ ಸಂಗಮದಲ್ಲಿ ಪೂಜೆ ಸಲ್ಲಿಸಿದರು.

ಈ ವೇಳೆ ಪ್ರಿಯಾಂಕಾ ಗಂಗಾ ನದಿಯ ನೀರನ್ನು ಬೊಗಸೆಯಲ್ಲಿ ಹಿಡಿದು ಕುಡಿದಿದ್ದು, ಈ ಪೋಟೋ ಸಾಮಾಜಿಲ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೀವು ಕುಡಿಯುತ್ತಿರುವ ಗಂಗೆಯನ್ನು ಶುದ್ಧೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು ಎಂಬುದು ನಿಮ್ಮ ಗಮನದಲ್ಲಿರಲಿ ಎಂದು ನೆಟ್ಟಿಗರು ಪ್ರಿಯಾಂಕಾ ಗಾಂಧಿಯನ್ನು ಕಾಲೆಳೆದಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Loksabha 2019 #Narendra Modi #Priyanka Vadra #Chwokidar