ನ್ಯೂಜಿಲೆಂಡ್ ಮಸೀದಿಯಲ್ಲಿ ಬಲಪಂಥೀಯ ಉಗ್ರವಾದಕ್ಕೆ 49 ಬಲಿ


16-03-2019 385

ಶಾಂತಿಗೆ ಹೆಸರಾದ ನ್ಯೂಜಿಲೆಂಡ್‍ನ  ದಕ್ಷಿಣ ಭಾಗದಲ್ಲಿರುವ  ಕ್ರೈಸ್ಟ್ ಚರ್ಚ್ ಎಂಬ ಪುಟ್ಟ ನಗರದಲ್ಲಿ ಶುಕ್ರವಾರ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿದ್ದು, 49 ಜನರನ್ನು ಬಲಿ ತೆಗೆದುಕೊಂಡಿದೆ.  ಕ್ರೈಸ್ಟ್ ಚರ್ಚ್ ನಗರದಲ್ಲಿರುವ ಎರಡು ಮಸೀದಿಗಳಲ್ಲಿ ಈ ದಾಳಿ ನಡೆದಿದ್ದು,  ಪ್ರಾರ್ಥನೆ ವೇಳೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 

ಅಲ್ ನೂರ್ ಮತ್ತು  ಲಿನ್‍ವುಡ್ ಮಸೀದಿಯಲ್ಲಿ  ಮಧ್ಯಾಹ್ನ 1.40 ರ ವೇಳೆಗೆ ಈ ಕೃತ್ಯ ನಡೆದಿದ್ದು,   ಘಟನೆಗೆ ಸಂಬಂಧಿಸಿದಂತೆ ನ್ಯೂಜಿಲೆಂಡ್ ಪೊಲೀಸರು ಆಸ್ಟ್ರೇಲಿಯಾ ಮೂಲದ  ಒಬ್ಬ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.  ಘಟನೆಯಲ್ಲಿ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದವರ ಪೈಕಿ 49 ಜನರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಇನ್ನು ಈ ಘಟನೆಯನ್ನು  ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ನ್ಯೂಜಿಲೆಂಟ್ ಪಾಲಿನ ಕತ್ತಲಿನ ದಿನಗಳು ಎಂದು  ಬಣ್ಣಿಸಿದ್ದಾರೆ.  ಅಲ್‍ನೂರ್ ಮಸೀದಿಗೆ ದಾಳಿ ನಡೆಸಿದ 20 ರ ಆಸುಪಾಸಿನ ದುಷ್ಕರ್ಮಿ ಆಸ್ಟ್ರೇಲಿಯಾ ಮೂಲದ  ಬಲಪಂಥೀಯ ಉಗ್ರನಾಗಿದ್ದು,  ಹಿಂಸಾವಾದಿ ಭಯೋತ್ಪಾದಕ ಎಂದು ಆಸ್ಟ್ರೇಲಿಯಾ ಪ್ರಧಾನಿ  ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ. 
ಅಮೆರಿಕ, ಪ್ರಾನ್ಸ್,ಟರ್ಕಿ,ಭಾರತ ಸೇರಿದಂತೆ  ವಿಶ್ವದ ಬಹುತೇಕ ರಾಷ್ಟ್ರಗಳು ಈ ಘಟನೆಯನ್ನು ಖಂಡಿಸಿದ್ದು, ನ್ಯೂಜಿಲೆಂಡ್ ಸಾಂತ್ವನ ಹೇಳಿ ಧೈರ್ಯ ತುಂಬಿವೆ. 

ನ್ಯೂಜಿಲೆಂಡ್‍ನ ಒಟ್ಟಾರೆ ಜನಸಂಖ್ಯೆ 50 ಲಕ್ಷ, ಅವರಲ್ಲಿ ಶೇಕಡಾ 1 ಅಂದ್ರೆ 50000 ಮುಸ್ಲಿಮರಿದ್ದಾರೆ.  ಇತ್ತೀಚಿನ ವರ್ಷದಲ್ಲಿ ನ್ಯೂಜಿಲೆಂಡ್‍ಗೆ ಮುಸ್ಲಿಂರ ವಲಸೆ ಹೆಚ್ಚಾಗಿದೆ.  ದಾಳಿಯ ಬಳಿಕ ನ್ಯೂಜಿಲೆಂಡ್ ಸಧ್ಯ ಯಾರು ಮಸೀದಿಗಳಿಗೆ ತೆರಳದಂತೆ ಮನವಿ ಮಾಡಿದೆ. 
ಇನ್ನು ದುಷ್ಕರ್ಮಿಗಳು ನಡೆಸಿದ ಹತ್ಯಾಕಾಂಡವನ್ನು ಪೇಸ್‍ಬುಕ್‍ನಲ್ಲಿ ಲೈವ್ ಮಾಡಿದ್ದು,  ಸಮವಸ್ತ್ರ ಮಾದರಿಯ  ಬುಲೆಟ್ ಪ್ರೂಫ್ ಬಟ್ಟೆ ಧರಿಸಿದ್ದ  ಆತ ಹೆಲ್ಮೆಟ್ ಹಾಕಿದ್ದ  ಹೆಲ್ಮೆಟ್ ಸಿಕ್ಕಿಸಲಾದ ಕ್ಯಾಮರಾದಲ್ಲಿ ಲೈವ್ ಸ್ಟ್ರಿಮಿಂಗ್ ನಡೆದಿದೆ. ಅಂದಾಜು 15 ನಿಮಿಷಗಳ ರುದ್ರನರ್ತನ ಪೇಸ್‍ಬುಕ್‍ನಲ್ಲಿ ದಾಖಲಾಗಿದೆ. ಇನ್ನು ನ್ಯೂಜಿಲೆಂಡ್‍ನಲ್ಲಿ ನಡೆದ ಈ ಘಟನೆ ವಿಶ್ವದ ಗಮನ ಸೆಳೆದಿದ್ದು, ಮುಸ್ಲಿಂ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ.  


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#New Zealand #49 Killed #Right wing #Attack