ಪ್ರೇಮಿಗಳ ಆತ್ಮಹತ್ಯೆ 


12-03-2019 290

ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ನಗರದ ಗೋರಿಪಾಳ್ಯದ ಯುವ ಜೋಡಿ ಯುವತಿಯವರ ಮನೆಯವರ ಕೊಲೆ ಬೆದರಿಕೆಗೆ ಹೆದರಿ ಫೇಸ್ ಬುಕ್‍ನಲ್ಲಿ ಕಷ್ಟ ಹೇಳಿಕೊಂಡು ಚಿಕ್ಕಮಂಗಳೂರಿನ ಮೂಡಿಗೆರೆಯ ಬಳಿ ನೇಣಿಗೆ ಶರಣಾಗಿದ್ದಾರೆ.

ಗೋರಿಪಾಳ್ಯದ ರಕ್ಷಿತಾ (19) ಹಾಗೂ ಶೇಷಾದ್ರಿ (20)ಎಂದು ಆತ್ಮಹತ್ಯೆಗೆ ಶರಣಾದ ಜೋಡಿಯನ್ನು ಗುರುತಿಸಲಾಗಿದೆ.ಪರಸ್ಪರ ಪ್ರೀತಿಸಿ ಹಿರಿಯರ ವಿರೋಧ ಲೆಕ್ಕಿಸದೇ ಇತ್ತೀಚಿಗೆ ಇವರಿಬ್ಬರು ಮನೆಬಿಟ್ಟು ಪರಾರಿಯಾಗಿ ಮದುವೆಯಾಗಿದ್ದರು.

ಮೇಲ್ಜಾತಿಗೆ ಸೇರಿದ ರಕ್ಷಿತಾ ಪೆÇೀಷಕರು ಇಬ್ಬರಿಗೆ ಕಿರುಕುಳ ನೀಡಿದ್ದು,ಕೊಲೆ ಮಾಡುವ ಬೆದರಿಕೆ ಹಾಕಿದ್ದರು.ಇದರಿಂದ ಮನನೊಂದ ಪ್ರೇಮಿಗಳು ಅವರು ಕೊಲೆ ಮಾಡುವ ಮುನ್ನ ನಾವೇ ಸಾಯುತ್ತೇವೆ ಎಂದು ಫೇಸ್ ಬುಕ್‍ನಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮ ಹತ್ಯೆಗೂ ಮುನ್ನ ಮುನ್ನ ಫೇಸ್ ಬುಕ್‍ನಲ್ಲಿ  ಇಬ್ಬರು ತಮ್ಮ ಕಷ್ಟ ತಿಳಿಸಿ ಸಾಯುತ್ತಿರುವುದಾಗಿ ಹೇಳಿದ್ದಾರೆ. ನಾವು ಪ್ರೀತಿ ಮಾಡಿರುವುದಿಂದ ನಮ್ಮ ಮನೆಯಲ್ಲಿ ತೊಂದರೆ ಆಗುತ್ತಿದ್ದು, ಇದರಲ್ಲಿ ನಮ್ಮ ತಪ್ಪೇನು ಇಲ್ಲ. ಎಲ್ಲವೂ ನಡೆದು ಹೋಯಿತು. ನಾವು ಬೇಕು ಎಂದು ಏನು ಮಾಡಿಲ್ಲ.ಯಾರಿಗೂ ಅವಮಾನ ಮಾಡಿಲ್ಲ. ನಮ್ಮಿಂದ ಕುಟುಂಬಕ್ಕೆ ತೊಂದರೆ ಆಗುವುದು ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಶೇಷಾದ್ರಿ ಯುವತಿಯ ಕುಟುಂಸ್ಥರ ಮೇಲೆ ಆರೋಪ ಮಾಡಿದ್ದು,ನಮ್ಮ ಜಾತಿ ಬೇರೆ ಆಗಿದ್ದೆ ಇದಕ್ಕೆಲ್ಲಾ ಕಾರಣ. ನಮಗೇ ಬದುಕಲು ಇಷ್ಟ ಇದ್ದು,ಡಿಸಿಪಿ ರವಿಚನ್ನಣ್ಣನವರ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದೇವು.ಆದರೆ ಅವರನ್ನು ಭೇಟಿ ಮಾಡುವ ಮುನ್ನವೇ ಇವರು ನಮ್ಮನ್ನು ಸಾಯಿಸುತ್ತಾರೆ. ಅವರ ಕೈಯಲ್ಲಿ ಸಾಯುವುದು ಬೇಡ ಎಂದು ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪೆÇಲೀಸರು ಪ್ರತಿ ದಿನ ನಮ್ಮ ತಂದೆಯವರನ್ನು ಕರೆದುಕೊಂಡು ಹೋಗುತ್ತಿದ್ದಾರೆ.ಇದರಿಂದ ನಮ್ಮ ತಂದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ನನಗೆ ತಂಗಿ, ಅಮ್ಮ ಇದ್ದು ಅವರ ಭವಿಷ್ಯ ಏನಾಗುತ್ತೆ ಇದಕ್ಕೆಲ್ಲಾ ನೀವೇ ಕಾರಣರಾಗಿದ್ದು,ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟುಕೊಳ್ಳಿ ಎಂದಿದ್ದಾರೆ.ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #Lovers Suscide #Bangalore #Chikkamagloor