ಪೇಟಿಎಂ ಇನ್ಮುಂದೆ ಕನ್ನಡದಲ್ಲಿ 


18-02-2019 338

ಆನ್‍ಲೈನ್‍ನಲ್ಲಿ ಹಣ ಪಾವತಿಸುವಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ಪೇಟಿಎಂ ಇನ್ಮುಂದೆ ಕರ್ನಾಟಕದ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ಹೌದು ಡಿಜಿಟಲ್ ಹಣ ಪಾವತಿ ಬಳಕೆದಾರರಿಗೆ ಇನ್ನಷ್ಟು ಸರಳವಾಗಿ ವ್ಯೆವಹಾರ ನಡೆಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪೇಟಿಎಂ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಆರಂಭಿಸಲು ನಿರ್ಧರಿಸಿದೆ.


ಪೇಟಿಎಂ ಆ್ಯಪ್‍ನ ಸೇವೆಯು ಕನ್ನಡದ ಜೊತೆಗೆ  ಗುಜರಾತಿ, ತೆಲುಗು, ಮರಾಠಿ, ಬಂಗಾಳಿ,ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ಇನ್ಮುಂದೆ  ಪೇಟಿಎಂ ಬಳಕೆಗೆ ಸಿಗಲಿದೆ. ಇಷ್ಟು ದಿನಗಳ ಕಾಲ ಪೇಟಿಎಂ ಕೇವಲ ಇಂಗ್ಲೀಷ್‍ನಲ್ಲಿ ಮಾತ್ರ ಲಭ್ಯವಿದ್ದು, ಗ್ರಾಮೀಣ ಭಾಗದ ಜನರಿಗೆ ಬಳಸಲು ಅನಾನುಕೂಲವಾಗಿತ್ತು. 

ಪೇಟಿಎಂ ಬಳಕೆದಾರರಲ್ಲಿ ಶೇಕಡಾ 35 ರಷ್ಟು ಜನರು ಪ್ರಾದೇಶಿಕ ಬಳಕೆಗೆ ಒಲವು  ತೋರುತ್ತಿರುವುದು ಕಂಡು ಬಂದಿದೆ.  ರಾಷ್ಟ್ರದ ಶೇ 88 ರಷ್ಟು ಹಳ್ಳಿಗಳೂ ಸಹ  ಪೇಟಿಎಂ ಬಳಕೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಪೇಟಿಎಂ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ. 


ಪೇಟಿಎಂ ಈ ಸೇವೆ ಆರಂಭಿಸುವ ಕುರಿತು  ಕಂಪನಿಯ ಹಿರಿಯ ಉಪಾಧ್ಯಕ್ಷ ದೀಪಕ್ ಅಬೋಟ್ ಮಾಹಿತಿ ನೀಡಿದ್ದು, ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಪ್ರಾದೇಶಿಕ ಭಾಷೆ ಅಳವಡಿಕೆಯ ಪ್ರಯತ್ನ ಆರಂಭಿಸಿದ್ದೇವೆ ಎಂದಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Paytm #App #Kannada #Business