ತರಬೇತಿ ವಿಮಾನ ಪತನ ಇಬ್ಬರು ಪೈಲೆಟ್‍ಗಳ ಸಾವು


01-02-2019 263

ನಗರದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಹೆಚ್‍ಎಎಲ್) ವಿಮಾನ ನಿಲ್ದಾಣದಿಂದ ಶುಕ್ರವಾರ ಬೆಳಿಗ್ಗೆ ಬಳಿ ತರಬೇತಿಗೆ ಹೊರಟ ಮೀರಜ್ ಮಿಗ್ ಯುದ್ಧ ವಿಮಾನ ಟೇಕ್‍ಆಫ್ (ಹಾರಿದ) ಕೆಲವೇ ಕ್ಷಣಗಳಲ್ಲಿ ಪತನಗೊಂಡು ಇಬ್ಬರು ಪೈಲೆಟ್‍ಗಳು ಮೃತಪಟ್ಟಿದ್ದಾರೆ

ತರಬೇತಿ ಮೀರಜ್ ಮಿಗ್ 2000 ಯುದ್ಧ ವಿಮಾನದಲ್ಲಿ ಹಾರಾಟಕ್ಕೆ ಹೊರಟ ಸ್ಕ್ವಾಡ್ರನ್ ಲೀಡರ್ ಸಿದ್ದಾರ್ಥ ನೇಗಿ(31) ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್(33) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಯಮಲೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.25ಕ್ಕೆ ಟೇಕ್‍ಆಫ್ ಆದ ಮೀರಜ್ ಮಿಗ್ 2000 ತರಬೇತಿ ಯುದ್ಧ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು ವಿಮಾನ ಪತನಗೊಳ್ಳುವುದು ಗಮನಕ್ಕೆ ಬಂದ ಕೂಡಲೇ ಇಬ್ಬರು ಎಜೆಕ್ಟ್ ಬಟನ್ ಪ್ರೆಸ್ ಮಾಡಿದ್ದಾರೆ.

ದುರಾದೃಷ್ಟವಶಾತ್ ಒಬ್ಬ ಸ್ಕ್ವಾಡ್ರನ್ ಲೀಡರ್ ಸಿದ್ದಾರ್ಥ ನೇಗಿ ಅಪಘಾತಗೊಂಡ ವಿಮಾನದ ಮೇಲೆಯೇ ಬಿದ್ದು ಸಾವನ್ನಪ್ಪಿದ್ದರೆ, ಮತ್ತೊಬ್ಬ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಗಾಯಗೊಂಡು ಕಮಾಂಡೋ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 
ಮೀರಜ್ ಮಿಗ್ ತರಬೇತಿ ಯುದ್ಧ ವಿಮಾನ ಹಾರಿದ ತಕ್ಷಣವೇ ಇಂಜಿನ್‍ನಲ್ಲಿ ದೋಷ ಕಂಡುಬಂದಿರುವುದನ್ನು ಗಮನಕ್ಕೆ ಬಂದ ಕೂಡಲೇ ಇಬ್ಬರು ಸ್ಕ್ವಾಡ್ರನ್ 
ಲೀಡರ್‍ಗಳು ದೂರಹಾರದೆ ಎಜೆಕ್ಟ್ ಬಟನ್ ಪ್ರೆಸ್ ಮಾಡಿದ್ದು, ಹಾರಿದ ಸ್ವಲ್ಪ ದೂರದಲ್ಲೇ ಜನವಸತಿ ಪ್ರದೇಶಕ್ಕೆ ವಿಮಾನ ಹೋಗದೇ ಪತನಗೊಂಡಿದ್ದು ವಿಮಾನ ನಿಲ್ದಾಣದ ಕಾಪೌಂಡ್ ಗೋಡೆಗೆ ಅಪ್ಪಳಿಸಿದ್ದರಿಂದ ಯಾವುದೇ ಪ್ರಾಣಹಾನಿಯಾಗಲಿ ಅನಾಹುತವಾಗಲಿ ಸಂಭವಿಸಿಲ್ಲ.

ಪತನಗೊಂಡ ವಿಮಾನದಿಂದ ಬೆಂಕಿ ಹತ್ತಿಕೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟಹೊಗೆ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಹೆಚ್‍ಎಎಲ್‍ನ ಹಿರಿಯ ಅಧಿಕಾರಿಗಳು ಧಾವಿಸಿ, ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿವೆ. ಪತನಗೊಂಡ ವಿಮಾನ ಬಹುತೇಕ ಸುಟ್ಟುಹೋಗಿದೆ.

ಘಟನಾ ಸ್ಥಳಕ್ಕೆ ನಗರ ಪೆÇಲೀಸ್ ಆಯುಕ್ತ ಸುನಿಲ್ ಕುಮಾರ್, ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಹೆಚ್‍ಎಎಲ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ವಿಮಾನ ಹಾರಿದ ಕೆಲವೇ ಕ್ಷಣದಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಘಟನೆ ಉಂಟಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ತರಬೇತಿ ವಿಮಾನವಾಗಿದ್ದರಿಂದ ಇಬ್ಬರು ಪೈಲಟ್‍ಗಳು ತೆರಳಿದ್ದಾರೆ. ಘಟನೆಯ ಕುರಿತು  ಹೆಚ್‍ಎಎಲ್‍ನ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Plane crash #Pilot #Two Died #Hal