ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋಗಿದ್ದೇ ದಿನೇಶ್ ಗುಂಡೂರಾವ್ ಸಾಧನೆ


29-01-2019 442

ಒಂದಷ್ಟು ದಿನ ರಾಜ್ಯದಲ್ಲಿ ಶಾಂತಿ ನೆಲೆಸಿತ್ತು.  ಯಾಕೆಂದ್ರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮೌನವಾಗಿದ್ದರು. ಇದೀಗ ಮತ್ತೊಮ್ಮೆ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಮಾತಿನ ಬಾಂಬ್ ಸ್ಪೋಟಿಸುವ ಮೂಲಕ ವಿವಾದಗಳ ಸರಮಾಲೆಯನ್ನೇ ಹುಟ್ಟುಹಾಕಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಯ ವಿಚಾರಕ್ಕೆ ಆರಂಭವಾದ ಚರ್ಚೆ, ದಿನೇಶ್ ಗುಂಡೂರಾವ್ ಮತ್ತು ಅನಂತಕುಮಾರ ಹೆಗಡೆ ನಡುವಿನ ಟ್ವಿಟ್ ಸಂಘರ್ಷಕ್ಕೆ ಕಾರಣವಾಗಿದ್ದು, ಮುಸ್ಲಿಂ ಮಹಿಳೆಯ ಹಿಂದೆ ಹೋಗಿದ್ದೆ ದಿನೇಶ್ ಗುಂಡೂರಾವ್ ಸಾಧನೆ ಅಂತ ಅನಂತಕುಮಾರ ಹೆಗಡೆ ಗುಡುಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಕೊಡಗಿನ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅನಂತಕುಮಾರ್ ಹೆಗಡೆ, ನಾವು ನಮ್ಮ ಸಮಾಜದ ಆದ್ಯತೆಯ ಬಗ್ಗೆ ಯೋಚಿಸಬೇಕು. ಅಕಸ್ಮಾತ ಯಾರಾದ್ರೂ ಹಿಂದು ಮಹಿಳೆಯ ಕೈಮುಟ್ಟಿದ್ರೆ  ಮುಟ್ಟಿದ ಕೈ ಅಸ್ತಿತ್ವದಲ್ಲೇ ಇರಬಾರದು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರೆ. ಈ ಹೇಳಿಕೆ ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಅನಂತಕುಮಾರ ಹೆಗಡೆ ಧರ್ಮ-ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. 

ಇನ್ನು ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವರು ಒಬ್ಬರು ಸಂಸದರಾ? ಸಂಸದರಾಗಿ,ಕೇಂದ್ರ ಸಚಿವರಾಗಿ ಇವರ ಸಾಧನೆಗಳೇನು ಎಂದು ಟ್ವಿಟರ್‍ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿರುವ ಅನಂತಕುಮಾರ ಹೆಗಡೆ, ನನ್ನ ಸಾಧನೆ ಬಗ್ಗೆ ಹೇಳಿಕೊಳ್ಳಲು ನನಗೆ ಖುಷಿಇದೆ. ಆದರೆ ದಿನೇಶ್ ಗುಂಡೂರಾವ್ ಸಾಧನೆ ಏನೆಂದು ನೋಡಿದಾಗ ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋಗಿದ್ದನ್ನು ಬಿಟ್ಟರೆ,  ಬೇರಾವ ಸಾಧನೆಯೂ ಕಾಣ್ತಿಲ್ಲ ಎಂದಿದ್ದಾರೆ. 
ಅನಂತಕುಮಾರ ಹೆಗಡೆಯವರ ಈ ಟ್ವಿಟ್ ದಿನೇಶ್ ಗುಂಡೂರಾವ್ ವೈಯಕ್ತಿಕ ಬದುಕನ್ನು ಸಾರ್ವಜನಿಕಗೊಳಿಸಿದಂತಾಗಿದ್ದು, ಇದಕ್ಕೆ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ಸಿಗರಿಂದಲೂ ತೀಕ್ಷ್ಣ ಪ್ರತಿಕ್ರಿಯೆ ಎದುರಾಗುವ ಸಾಧ್ಯತೆ ಇದೆ. ಈ ಹಿಂದೆಯೂ ಸಾಕಷ್ಟು ಭಾರಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಮ್ಮ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸಿದ್ದರು. ಸಂವಿಧಾನ ಬದಲಾಯಿಸುವ ಅವರ ಹೇಳಿಕೆಯಿಂದ ರಾಜ್ಯದ್ಯಾಂತ ಸಾಕಷ್ಟು ಪ್ರತಿಭಟನೆಗಳು ನಡೆದು ಬಿಜೆಪಿ ತಕ್ಕಮಟ್ಟಿನ ಮುಜುಗರವನ್ನು ಎದುರಿಸುವಂತಾಗಿದೆ. ಬಳಿಕ ಒಂದಷ್ಟು ದಿನಗಳ ಕಾಲ ಮೌನವಾಗಿದ್ದ ಅನಂತಕುಮಾರ್  ಹೆಗಡೆ ಇದೀಗ ಮತ್ತೆ ಕಣಕ್ಕಿಳಿದಿದ್ದು, ರಾಜ್ಯದಲ್ಲಿ ತಮ್ಮ ಮಾತುಗಳಿಂದಲೇ ಬೆಂಕಿಯ ಕಿಡಿ ಹೊತ್ತಿಸಿದ್ದಾರೆ. 
 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Ananth Kumar Hegde #Dinesh Gundurao #Tweet War #Personal