ತಂಗಿ ಪ್ರೀತಿಸಿದ್ದಕ್ಕೆ ಅಣ್ಣನಿಂದ ಹಲ್ಲೆ 


23-01-2019 228

ಹಲವು ಬಾರಿ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ತಂಗಿಯನ್ನ ಪ್ರೀತಿಸುತ್ತಿದ್ದ ಯುವಕನಿಗೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಅಣ್ಣನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ.  ಕೃತ್ಯದಲ್ಲಿ ಭಾಗಿಯಾಗಿದ್ದ ಇತರರಿಗಾಗಿ ತೀವ್ರ ಶೋಧ ಆರಂಭಗೊಂಡಿದೆ. 

ದಾಸರಹಳ್ಳಿಯ ರಾಜೇಶ್(25)ಬಂಧಿತ ಆರೋಪಿಯಾಗಿದ್ದಾನೆ,ಹಲ್ಲೆಯಿಂದ ಗಾಯಗೊಂಡಿದ್ದ ಖಾಸಗಿ ಶಾಲಾ ವಾಹನ ಚಾಲಕ ಮಂಜುನಾಥ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಹಲ್ಲೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರಾಜೇಶ್‍ನ ಸ್ನೇಹಿತರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಸರಹಳ್ಳಿಯ ಸೋಮ ಅಲಿಯಾಸ್ ರಾಜೇಶ್ ತಂಗಿಯನ್ನ ಮಂಜುನಾಥ್ ಪ್ರೀತಿಸುತ್ತಿದ್ದ ವಿಷಯ ತಿಳಿದ ಸೋಮ ಹಲವು ಬಾರಿ ಮಂಜುನಾಥನಿಗೆ ಎಚ್ಚರಿಕೆ ಮಾಡಿದ್ದ. ಇದನ್ನ ಕೇಳದ ಮಂಜುನಾಥ ತನ್ನ ಪ್ರೀತಿ ಮುಂದುವರೆಸಿದ್ದ.ಇದರಿಂದ ಕೋಪಗೊಂಡ ಸೋಮ ಮಂಜುನಾಥನಿಗೆ ಬುದ್ಧಿಕಲಿಸಲು ನಾಲ್ವರ ಜೊತೆ ಗುಂಪಿನೊಂದಿಗೆ ದಾಸರಹಳ್ಳಿ ಬೇಕರಿ ಪಕ್ಕ ನಿಂತಿದ್ದ ಮಂಜುನಾಥನ ಮೇಲೆ  ಹಲ್ಲೆ ಮಾಡಿ ಪರಾರಿಯಾಗಿದ್ದರು.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದ  ಬಾಗಲಗುಂಟೆ ಪೆÇಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಬೇಕರಿ ಮಾಲೀಕ, ಸ್ಥಳೀಯರ ಹೇಳಿಕೆ ಪಡೆದು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Attack #Driver #Love Story #Bangalore