ಸಿದ್ಧಗಂಗಾ ಶ್ರೀಗಳ ಆರೋಗ್ಯಕ್ಕೆ ಮೋದಿ ಪ್ರಾರ್ಥನೆ


18-01-2019 244

ಅನಾರೋಗ್ಯದಿಂದ ಬಳಲುತ್ತಿರುವ ನಡೆದಾಡುವ  ದೇವರು ಖ್ಯಾತಿಯ ಸಿದ್ಧಗಂಗಾ ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ. ಕನ್ನಡದಲ್ಲಿ ಟ್ವಿಟ್ ಮಾಡಿರುವ ನರೇಂದ್ರ ಮೋದಿಯವರು, ತುಮಕೂರು ಸಿದ್ಧಗಂಗಾ ಶ್ರೀಗಳು ಇದೀಗ ಕೃತಕ ಉಸಿರಾಟದಲ್ಲಿದ್ದಾರೆ. ಅವರೀಗ ಕೃತಕ ಉಸಿರಾಟದಲ್ಲಿ ಇರುವಂತಾಗಿದೆ. ಶ್ರೀಗಳು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
 
ಮೊನ್ನೆ ಸಿದ್ಧಗಂಗಾ ಶ್ರೀಗಳ ಆಶಯದಂತೆ ಅವರನ್ನು ತುಮಕೂರಿನ ಆಸ್ಪತ್ರೆಯಿಂದ ಹಳೆ ಮಠಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಪರಮೇಶ್ವರ್ ಸ್ವಾಮೀಜಿಯ ಚಿಕಿತ್ಸೆಯ ನೇತೃತ್ವ ವಹಿಸಿದ್ದು, ಸ್ವಾಮೀಜಿಯ ಪ್ರೀತಿಯ ಶಿಷ್ಯ ಹಾಗೂ ಶ್ರೀಮಠದ ಹಳೆಯ ವಿದ್ಯಾರ್ಥಿ ಡಾ.ನಾಗಣ್ಣ ಕೂಡ ವೈದ್ಯರ ತಂಡದೊಂದಿಗೆ ಸೇರಿಕೊಂಡು ಸ್ವಾಮೀಜಿಯ ಆರೋಗ್ಯ ಚೇತರಿಸಿಕೊಳ್ಳಲು ಅಗತ್ಯ ಪ್ರಯತ್ನ ಆರಂಭಿಸಿದ್ದಾರೆ.
 
ಇನ್ನು ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಸಿದ್ದಲಿಂಗ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರನಿಗೆ ಗುರುವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಗಿದೆ.  ಕಿರಿಯ ಸ್ವಾಮೀಜಿ ಸಿದ್ದಲಿಂಗಸ್ವಾಮೀಜಿ ನೇತೃತ್ವದಲ್ಲಿ 8 ಸ್ವಾಮೀಜಿಗಳು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಸಿದ್ಧಗಂಗಾ ಮಠಕ್ಕೆ ಮೈಸೂರು ಯುವರಾಜ ಯದುವೀರ್, ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ನೂರಾರು ಗಣ್ಯರು ಭೇಟಿ ನೀಡಿದ್ದು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. 

ನಾಡಿನ ಎಲ್ಲೆಡೆ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗೆ ನೂರಾರು ಪೂಜೆಪುನಸ್ಕಾರಗಳು ಆರಂಭವಾಗಿದ್ದು, ಮಠದಲ್ಲಿನ ಮಕ್ಕಳು ಕೂಡ ಶ್ರೀಗಳ ಆರೋಗ್ಯ ಹಾಗೂ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ ಎನ್ನಲಾಗುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಸೋಂಕು ತಗಲುವ ಭೀತಿಯಿಂದ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಶ್ರೀಗಳ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

# Siddaganga Swamiji #Prays #Narendra Modi #Recovery