ಸವೋಚ್ಛನ್ಯಾಯಾಲಯದ ನ್ಯಾಯಮೂರ್ತಿಯಾಗಿ ದಿನೇಶ್ ಮಹೇಶ್ವರಿ


17-01-2019 210

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಸರ್ವೋಚ್ಛ ನ್ಯಾಯಾಲಯದ  ನ್ಯಾಯಮೂರ್ತಿಯಾಗಿ ನೇಮಕಗೊಂಡ ದಿನೇಶ್ ಮಹೇಶ್ವರಿ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.ಬಳಿಕ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ನಲ್ಲಿ ಸೇವೆ ಸಲ್ಲಸುತ್ತಿದ್ದ ಸಂದರ್ಭದಲ್ಲಿ ಮಹೇಶ್ವರಿ ಅವರು, ಸರ್ಕಾರಕ್ಕೆ ಮಾರ್ಗಸೂಚಿಯಾಗುವಂತಹ ಹಲವು ತೀರ್ಪುಗಳು ನೀಡಿದ್ದಾರೆ. ಅದರಲ್ಲಿ ಬೆಂಗಳೂರಿನ ಸ್ವಚ್ಛತೆಗೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನ ಅತ್ಯಂತ ಮಹತ್ವದ್ದಾಗಿದೆ. ದಿನೇಶ್ ಮಹೇಶ್ವರಿ ಅವರ ಮುಂದಿನ ವೃತ್ತಿ ಜೀವನ ಶುಭವಾಗಲಿ ಎಂದು ಅವರು ಹಾರೈಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾದ ಬೆನ್ನಲ್ಲೆ ಉಪ ಮುಖ್ಯಮಂತ್ರಿ ಡಾ. ಜಿ ಪರಂಮೇಶ್ವರ್ ಅವರು ದಿನೇಶ್ ಮಹೇಶ್ವರಿ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. 2018ರ ಫೆ.12ರಿಂದ ಅವರು ಕರ್ನಾಟಕದ ಸಿಜೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂಲತಃ ರಾಜಸ್ತಾನದವರಾದ ಅವರು, 2004 ಸೆ.2ರಂದು ರಾಜಸ್ತಾನ ಹೈಕೋರ್ಟ್‍ನ ನ್ಯಾಯಮೂರ್ತಿಯಾಗಿ ನೇಮಕಗೊಂಡು ಬಳಿಕ, 2014 ಜುಲೈನಲ್ಲಿ ಅಲಹಾಬಾದ್‍ಗೆ ವರ್ಗಾವಣೆಗೊಂಡಿದ್ದರು. ನಂತರ 2016ರ ಫೆಬ್ರವರಿಯಲ್ಲಿ ಮೇಘಾಲಯ ಸಿಜೆಯಾಗಿ ಪದೋನ್ನತಿ ಪಡೆದಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

# Dinesh Maheshwari #Justice #Supreme Court #Kumarswamy