ಮೋದಿಗಾಗಿ ಮಹಿಳೆಯಿಂದ ಅಷ್ಟರಾಜ್ಯಗಳಿಗೆ ಬುಲೆಟ್ ಯಾತ್ರೆ 


15-01-2019 252

ಈಕೆ ಬಿಜೆಪಿ ಕಾರ್ಯಕರ್ತೆಯಲ್ಲ. ಆದರೂ ಆಕೆಯ ಆಯ್ಕೆ ನರೇಂದ್ರ ಮೋದಿ. ಹೌದು ಪ್ರಧಾನಿ ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗಬೇಕೆಂಬ ಹಂಬಲವನ್ನಿಟ್ಟುಕೊಂಡು ತಮಿಳುನಾಡು ಮೂಲದ ಮಹಿಳೆಯೊಬ್ಬರು ಅಷ್ಟರಾಜ್ಯಗಳ ಬುಲೆಟ್ ಜಾಥಾ ಹಮ್ಮಿಕೊಂಡಿದ್ದಾರೆ. ಈ ಜಾಥಾ ಸಿಲಿಕಾನ ಸಿಟಿ ಬೆಂಗಳೂರಿನ ಟೌನ್ ಹಾಲ್‍ನಿಂದ ಇಂದು ಆರಂಭವಾಗಿದ್ದು, ಕರ್ನಾಟಕ,ಗೋವಾ,ಮಹಾರಾಷ್ಟ್ರ,ಗುಜರಾತ್,ಮಧ್ಯಪ್ರದೇಶ,ಉತ್ತರ ಪ್ರದೇಶ ಮೂಲಕ ಸಾಗಿ ದೆಹಲಿಯಲ್ಲಿ ಅಂತ್ಯ ಕಾಣಲಿದೆ. 

ತಮಿಳುನಾಡು ಮೂಲದ ರಾಜಲಕ್ಷ್ಮೀ ಹೀಗೆ ಬುಲೆಟ್ ಜಾಗೃತಿ ಜಾಥಾ ಕೈಗೊಂಡ ಮಹಿಳೆ. ಜನರಿಗೆ ಮಹಿಳಾ ಶಕ್ತಿಯನ್ನು ಪರಿಚಯ ಮಾಡಿಕೊಡುವುದು. ಜೊತೆಗೆ ಮಹಿಳೆಯರಿಗೆ ಮೋದಿಯವರು ತಂದ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವುದು. ಸ್ಥಳೀಯ ಭಾಷೆಗಳಲ್ಲಿ ಜನರೊಂದಿಗೆ ಸಂವಹನ ನಡೆಸಿ ಮೋದಿ ಅಪ್ಲಿಕೇಶನ್ ಬಳಕೆಯ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ರಾಜಲಕ್ಷ್ಮೀ ಹೊಂದಿದ್ದಾರೆ. 

ಅಂದಾಜು 15225 ಕಿಲೋಮೀಟರ್ ದೂರವನ್ನು ರಾಜಲಕ್ಷ್ಮೀ ಬುಲೆಟ್‍ನಲ್ಲಿ ಕ್ರಮಿಸಲಿದ್ದಾರೆ. ಅವರಿಗೆ 25ಕ್ಕೂ ಹೆಚ್ಚು ಜನರು ಈ ಯಾತ್ರೆಯಲ್ಲಿ ಸಹಾಯ ಮಾಡಲಿದ್ದು, ರಾಜಲಕ್ಷ್ಮೀಯವರೊಂದಿಗೆ ಸಂಚರಿಸಲಿದ್ದಾರೆ. ಟೌನ್‍ಹಾಲ್‍ನಿಂದ ಮಂಡ್ಯ ಮೂಲಕ ಮೈಸೂರಿಗೆ ರಾಜಲಕ್ಷ್ಮೀ ಪ್ರವಾಸ ಆರಂಭಿಸಿದ್ದಾರೆ. ಸಾಹಸಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ರಾಜಲಕ್ಷ್ಮೀ ಬಿಜೆಪಿ ಪಕ್ಷಕ್ಕೆ ಸೇರದಿದ್ದರೂ ಮೋದಿಯವರನ್ನು ಅಪಾರವಾಗಿ ಗೌರವಿಸುತ್ತಿದ್ದು, ಅವರು ಇನ್ನೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ಕಾರಣಕ್ಕೆ ಯಾತ್ರೆ ಕೈಗೊಂಡಿರುವುದಾಗಿ ಹೇಳಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Rajlakshmi #For Modi #Bullet Yatra #8 States