ಬಾಲಿವುಡ್‍ಗೆ ಮಾನ್ವಿತಾ ಲಗ್ಗೆ 


09-01-2019 236

ಕನ್ನಡದಲ್ಲಿ ಪರಭಾಷೆಯ ನಟಿಯರ ದಂಡುಬರ್ತಿರೋ ವೇಗದಲ್ಲೇ ಸ್ಯಾಂಡಲವುಡ್ ಪ್ರತಿಭೆಗಳು ಕೂಡ ಬಾಲಿವುಡ್‍ನಲ್ಲಿ ಸದ್ದು ಮಾಡ್ತಿದೆ. ಗಾಳಿಪಟ ಚೆಲುವೆ ಭಾವನಾ ರಾವ್ ಹಿಂದಿ ಚಿತ್ರದಲ್ಲಿ ಅವಕಾಶ ಪಡೆದುಕೊಂಡ ಬೆನ್ನಲ್ಲೇ ಇದೀಗ ಟಗರು ಸುಂದರಿ ಮಾನ್ವಿತಾ ಕೂಡ ಬಾಲಿವುಡ್‍ನತ್ತ ಹೆಜ್ಜೆ  ಹಾಕಿದ್ದಾರೆ. 

ಬಾಲಿವುಡ್‍ನಲ್ಲಿ ಅವಕಾಶ ಸಿಕ್ಕಿರೋದರಿಂದ ಮುಂಬೈನಲ್ಲೇ ಬೀಡುಬಿಟ್ಟು ಹಾಟ್-ಹಾಟ್ ಪೋಟೋ ಶೂಟ್ ಮಾಡಿಸಿರೋ ಮಾನ್ವಿತಾ ಚಿತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಇನ್ನು ಮಾತುಕತೆ ಹಂತದಲ್ಲಿದ್ದು, ಸಧ್ಯದಲ್ಲೆ ಎಲ್ಲ ಮಾಹಿತಿ ನೀಡ್ತಿನಿ ಅನ್ನೋ ಭರವಸೆ ನೀಡಿದ್ದಾರೆ. 

ಟಗರು ಚಿತ್ರದ ಬಳಿಕ ಮಾನ್ವಿತಾ ಅಭಿನಯಕ್ಕೆ ಸ್ಯಾಂಡಲವುಡ್ ಮಾರು ಹೋಗಿದ್ದು, ಆಫರ್‍ಗಳ ಸುರಿಮಳೆಯೇ ಮಾನ್ವಿತಾ ಕೈಯಲ್ಲಿದೆ. ಆದರೆ ಸ್ಕ್ರಿಪ್ಟ್ ಹಾಗೂ ಚಿತ್ರ ಆಯ್ಕೆಯಲ್ಲಿ ಮಾನ್ವಿತಾ ತುಂಬಾ ಚ್ಯೂಸಿಯಾಗಿದ್ದು. ಈಗಾಗಲೆ ನಾಗತಿಹಳ್ಳಿ ಚಂದ್ರಶೇಖರ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ ಧೀರೇನ್ ಕುಮಾರ್ ಅವರ ಚಿತ್ರದಲ್ಲೂ  ಕಾಣಿಸಿಕೊಂಡಿದ್ದಾರೆ. 
ಈಗ ಮಾನ್ವಿತಾ ಮೆರೂನ್ ಕಲರ್ ನ್ಯೂ ಟ್ರೆಂಡ್ ಡ್ರೆಸ್ ಹಾಗೂ ಪಾರ್ಟಿವೇರ್‍ನಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದು, ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡಿವೆ. ಒಟ್ಟಿನಲ್ಲಿ ಬಾಲಿವುಡ್‍ನಲ್ಲಿ ಕನ್ನಡತಿಯರು ದರ್ಬಾರ್ ಮಾಡುವ ದಿನಗಳು ದೂರವಿದ್ದಂತಿಲ್ಲ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Bollywood #Manvitha #Photoshoot #Hot