ಅಧ್ಯಕ್ಷ ಸ್ಥಾನ ಬಿಡಲು ಎಷ್ಟೊಂದು ಕಾರಣಗಳು...!


28-12-2018 313

 

ಲೋಕಸಭಾ ಚುಣಾವಣೆಯಲ್ಲಿ ಮೋದಿ ಓಟವನ್ನು ಕಟ್ಟಿಹಾಕುವ ಕನಸಿನಲ್ಲಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುವ ಸಿದ್ಧತೆ ನಡೆಸಿರುವ ಜೆಡಿಎಸ್‍ಗೆ ಹೊಸ ಸಂಕಷ್ಟವೊಂದು  ತಲೆದೋರಿದೆ. ಜೆಡಿಎಸ್‍ನ ರಾಜ್ಯಾಧ್ಯಕ್ಷರಾದ ಹಿರಿಯ ರಾಜಕಾರಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಅನಾರೋಗ್ಯವನ್ನು ಕಾರಣವಾಗಿ ಇಟ್ಟುಕೊಂಡು ರಾಜೀನಾಮೆ ನೀಡಲು ಹೊರಟಿರುವ ಎಚ್.ವಿಶ್ವನಾಥ ರಾಜೀನಾಮೆಗೆ ನಿಜವಾದ ಕಾರಣ ಏನು ಗೊತ್ತಾ? ಜೆಡಿಎಸ್‍ನಲ್ಲಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥರವರಿಗೆ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷನಿಗೆ ಇರುವಷ್ಟು ಅಧಿಕಾರ ಹಾಗೂ ಸ್ವಾತಂತ್ರ್ಯವೂ ಇಲ್ಲ.

 ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಆರೋಪವಿದ್ದರೂ ಕಾಂಗ್ರೆಸ್‍ನಲ್ಲಿ ಸಿಗದ ಸ್ಥಾನಮಾನ ಜೆಡಿಎಸ್‍ನಲ್ಲಿ ಹುಡುಕಿಕೊಂಡು ಮಾಜಿ ಸಚಿವ, ಸಾಹಿತಿ, ಚಿಂತಕ,ಹಿಂದುಳಿದ ವರ್ಗಗಳ ನೇತಾರ ಎಚ್.ವಿಶ್ವನಾಥ ತೆನೆ ಹೊತ್ತು ಜೆಡಿಎಸ್ ಸೇರ್ಪಡೆಗೊಂಡಿದ್ದರು.  ಚುನಾವಣೆ ಬಳಿಕ ಅದೃಷ್ಟವಶಾತ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿಯವರು ಅನಿವಾರ್ಯವಾಗಿ ರಾಜ್ಯಾಧ್ಯಕ್ಷ ಪಟ್ಟವನ್ನು ಬಿಟ್ಟು ಕೊಡಲೇ ಬೇಕಾಯಿತು. ಹೀಗಾಗಿ ಅನಾಯಾಸವಾಗಿ ವಿಶ್ವನಾಥ ಅವರನ್ನು ರಾಜ್ಯಾಧ್ಯಕ್ಷರ ಪಟ್ಟಕ್ಕೆ ಏರಿಸಿತು. ಆಗಲೆ ಅನೇಕ ಮಂದಿ ಹುಬ್ಬೇರಿಸಿದ್ದರು. ಜೆಡಿಎಸ್ ಹುದ್ದೆ ನೀಡಿದರೂ ವಿಶ್ವನಾಥ್‍ಗೆ ಅಧಿಕಾರ ಮಾತ್ರ ನೀಡಲೇ ಇಲ್ಲ. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರೇ ಹೇಳುವ ಪ್ರಕಾರ ವಿಶ್ವನಾಥ ಅಕ್ಷರಷಃ ರಬ್ಬರ್ ಸ್ಟ್ಯಾಂಪ್‍ನಂತಾಗಿ ಹೋಗಿದ್ದರು.  

ಪಕ್ಷದ ಆಂತರಿಕ ವಿಚಾರದಲ್ಲೇ ಆಗಲಿ  ಅಥವಾ  ಪಕ್ಷದ ಜವಾಬ್ದಾರಿಗಳ ಹಂಚಿಕೆ ಸಂದರ್ಭದಲ್ಲೇ ಆಗಲಿ ವಿಶ್ವನಾಥಗೆ ಮಾಜಿ ಪ್ರಧಾನಿ ದೇವೆಗೌಡರಾಗಲಿ, ಕುಮಾರಸ್ವಾಮಿಯಾಗಲಿ ಮಹತ್ವವನ್ನು ನೀಡಲಿಲ್ಲ. ಕೆಲವ ಸಂದರ್ಭದಲ್ಲಂತೂ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ವಿಶ್ವನಾಥ ಅವರ ಗಮನಕ್ಕೇ ಬರುತ್ತಿರಲಿಲ್ಲ. ಈ ಆಟಕ್ಕುಂಟು ಲೆಕ್ಕಕ್ಕಿಲ್ಲ ಧೋರಣೆಯಿಂದ ನೊಂದ ವಿಶ್ವನಾಥ್ ಕೊನೆಗೂ ಮನೆಯತ್ತ ಮುಖ ಮಾಡುವ ನಿರ್ಧಾರ ಮಾಡಿದಂತಿದೆ. 


ಸರಿ ಸಮಯಕ್ಕೆ ಅನಾರೋಗ್ಯಕ್ಕೂ ತುತ್ತಾಗಿರುವ ಎಚ್.ವಿಶ್ವನಾಥ ಇದೇ ಕಾರಣದೊಂದಿಗೆ ಹೊರಹೋಗಲು ನಿರ್ಧರಿಸಿದ್ದಾರೆ. ಆದರೆ ದೇವೆಗೌಡರನ್ನು ,ಕುಮಾರಸ್ವಾಮಿಯನ್ನು ಚೆನ್ನಾಗಿ ಬಲ್ಲ ವಿಶ್ವನಾಥ ಇದನ್ನು ಮೊದಲೇ ಯಾಕೆ ತಿಳಿದಿರಲಿಲ್ಲವೆಂದು ಅನೇಕರು ಆಶ್ಚಯ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಸ್ವಕ್ಷೇತ್ರಕ್ಕೂ ಸಮಯ ಕೊಡಲಾಗುತ್ತಿಲ್ಲ. ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ವೈದ್ಯರು ಹೆಚ್ಚಿನ ಆಯಾಸ ಮಾಡಿಕೊಳ್ಳದೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿರೋದರಿಂದ ನಾನು ಈ ಜವಾಬ್ದಾರಿಯಿಂದ ಮುಕ್ತನಾಗಲು ಬಯಸುತ್ತಿದ್ದೇನೆ ಎಂದು ವಿಶ್ವನಾಥ ಹೇಳಿದ್ದಾರೆ. ಆದರೆ ಅಸಲಿ ಕಾರಣ ದೊಡ್ಡಗೌಡರು ಮತ್ತು ಗೌಡರ ಮಕ್ಕಳ ಅಂಧಾದರ್ಬಾರ್ ಅನ್ನೋದನ್ನು ವಿಶ್ವನಾಥ್ ಅಭಿಮಾನಿಗಳೇ ಹೇಳುತ್ತಿದ್ದು, ಅವರು ಎಷ್ಟು ಬೇಗ ಹೊರಗೆ ಬರುತ್ತಾರೋ ಅದು ಅವರಿಗೆ ಅಷ್ಟೇ ಒಳ್ಳೆಯದು ಎಂದು ಮುಲಾಜಿಲ್ಲದೇ ಹೇಳುತ್ತಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Jds # H Viswanath # president Chair #Reasons to leave