ಟ್ವಿಟರ್ ವಾರ್ ನಲ್ಲಿ ಡಿಕೆಶಿ ವರ್ಸಸ್ ಕಾಂಗ್ರೆಸ್?


27-12-2018 624

ಕಾಂಗ್ರೆಸ್ ಸಂಕಷ್ಟದ ಸಮಯದಲ್ಲಿ ಶ್ರೀಕೃಷ್ಣನಂತೆ ಟ್ರಬಲ್ ಶೂಟರ್ ಆಗಿ ನಿಲ್ಲುವ ಸಚಿವ ಡಿ.ಕೆ.ಕುಮಾರ್ ಮತ್ತು ಕಾಂಗ್ರೆಸ್ ನಡುವೆ ಈಗ ಎಲ್ಲವೂ ಸರಿ ಇಲ್ಲವಾ? ಇಂತಹದೊಂದು ಪ್ರಶ್ನೆಗೆ ಹೌದು ಎನ್ನುತ್ತಿದೆ ಪ್ರಸಕ್ತ ಬೆಳವಣಿಗೆ. ಇದಕ್ಕೆ ಕಾರಣ ಬೇರೆನೂ ಅಲ್ಲ ಟ್ವಿಟರ್ ವಾರ್. 


 ಹೌದು ಕಾಂಗ್ರೆಸ್ ನ ಅಂತಃಶಕ್ತಿ ಎಂದೇ ಬಿಂಬಿತವಾಗುವ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಡುವೆ ಟ್ವಿಟರ್ ನಲ್ಲಿ ಶೀತಲ ಸಮರ ನಡೆಯುತ್ತಿದೆ ಎಂದು ಸೂಪರ್ ಸುದ್ದಿಗೆ ತಿಳಿದುಬಂದಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನ ಐಟಿ ಸೆಲ್ ಬಗ್ಗೆ ಅಸಮಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ವಾಸ್ತವದಲ್ಲಿ ನಡೆದಿರೋದೆ ಬೇರೆ. ಈ ಹಿಂದೆ ಕಾಂಗ್ರೆಸ್ ನ ಐಟಿ ಸೆಲ್ ನೋಡಿಕೊಳ್ಳುತ್ತಿದ್ದ ಕಾರ್ಯಕರ್ತನೊಬ್ಬ ಅತ್ತ ಡಿಕೆಶಿಯವರಿಂದಲೂ ಸಂಬಳ ಪಡೆಯುತ್ತಿದ್ದು, ಅವರ ಸಾಮಾಜಿಕ ಜಾಲತಾಣವನ್ನು ನಿರ್ವಹಣೆ ಮಾಡುತ್ತಿದ್ದ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಐಟಿ ಸೆಲ್‍ನಿಂದ ಆತನನ್ನು ಹೊರಹಾಕಲಾಗಿತ್ತು. 


   ಹೀಗೆ ಕೆಲಸ ಕಳೆದುಕೊಂಡ ಆತ ದ್ವೇಷ ತೀರಿಸಿಕೊಳ್ಳಲು ಡಿಕೆಶಿಯವರ ವೈಯಕ್ತಿಕ ಖಾತೆಯಿಂದ ಪಕ್ಷದ ಕುರಿತು ಅಸಮಧಾನ ಇರುವ ರೀತಿಯಲ್ಲಿ ಟ್ವಿಟ್ ಮಾಡುತ್ತಿದ್ದಾನಂತೆ.  ಇದು ಡಿಕೆಶಿಯವರ ಅಭಿಪ್ರಾಯವೆಂದು ಪರಿಗಣಿಸುತ್ತಿರುವ ಕಾಂಗ್ರೆಸ್ ಐಟಿ ಸೆಲ್ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದೆ. ಹೀಗಾಗಿ ಸಾಮಾನ್ಯ ಕಾರ್ಯಕರ್ತರು ಡಿಕೆಶಿ ಮತ್ತು ಪಕ್ಷದ ನಡುವ ಭಿನ್ನಾಭಿಪ್ರಾಯವಿದೆ ಎಂದು ಭಾವಿಸುತ್ತಿದ್ದಾರೆ. 


  ರಾಮನಗರ ಉಪಚುನಾವಣೆ ವೇಳೆಯಲ್ಲೂ, ಚಂದ್ರಶೇಖರ್ ಪಕ್ಷ ತ್ಯಜಿಸಿದಾಗ ಕಾಂಗ್ರೆಸ್‍ನವರು ಡಿಕೆಶಿಯವರನ್ನು ಟೀಕಿಸುವ ರೀತಿಯಲ್ಲಿ ಟ್ವಿಟ್ ಮಾಡಿದ್ದರು. ಇದು ಡಿಕೆಶಿಯವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈ ಎಲ್ಲ ತಪ್ಪುತಿಳುವಳಿಕೆಳಿಗೆ ಕಾರಣ  ಮೂರನೇ  ವ್ಯಕ್ತಿ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಆದರೆ ಪಕ್ಷ ಹಾಗೂ ಡಿಕೆಶಿ ನಡುವಿನ ಈ ಶೀತಲ ಸಮರದ ಲಾಭ ಬಿಜೆಪಿಗೆ ದೊರೆಯುವ ಮುನ್ನ ಡಿಕೆಶಿ ಮತ್ತು ಕಾಂಗ್ರೆಸ್ ಐಟಿ ಸೆಲ್ ಎಚ್ಚೆತ್ತುಕೊಂಡರೆ ಉತ್ತಮ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Twitter War #Versus # D.K. Shivkumar #Congres