‘ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ: ಯಡಿಯೂರಪ್ಪ


20-09-2018 486

ಬೆಂಗಳೂರು: ‘ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತನಾಡುತ್ತಿರುವುದು ನೀವು ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಇಂದಿಲ್ಲಿ ಮಾತನಾಡಿದ ಬಿಎಸ್ವೈ ‘ಬಿಜೆಪಿಯಿಂದ ಇದುವರೆಗೂ ನಡೆದ ಸಭೆಯಲ್ಲಿ ನಾವು ಡಿ.ಕೆ.ಶಿವಕುಮಾರ್ ವಿರುದ್ಧ ‌ ಮಾತನಾಡಿಲ್ಲ, ಇಡಿ ದಾಖಲಿಸಿರುವ ಕೇಸ್ ನಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದ ಅವರು, ನಿನ್ನೆ ನೀವು(ಸಿಎಂ) ಉದ್ಧಟತನದಿಂದ ಮಾತನಾಡಿದ್ದೀರಿ, ತನ್ನ ವಿರುದ್ಧ ಯಾವುದೇ ಹಗರಣವಿಲ್ಲ ಎಂದರು.

‘ಮಾಜಿ ಸಿಚಿವ ಎ.ಮಂಜು ಆರೋಪಕ್ಕೆ ಕುಮಾರಸ್ವಾಮಿ ಇನ್ನೂ ನೀವು ಉತ್ತರ ಕೊಟ್ಟಿಲ್ಲ. ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ, ಕುಮಾರಸ್ವಾಮಿಯವರ ಎಲ್ಲಾ ಹಗರಣಗಳು ಬಯಲಾಗುತ್ತೆ ಕಾದು ನೋಡಿ' ಎಂದು ಹೇಳಿದ್ದಾರೆ.

‘ನಿಮ್ಮದೇ ಸರ್ಕಾರ ಇದೆಯಲ್ಲ ನನ್ನ ಬಗ್ಗೆ ಇರುವ ಆರೋಪಗಳನ್ನು ತನಿಖೆ ಮಾಡಿಸಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ, ನಮಗೂ ಎಲ್ಲಾ ಗೊತ್ತಿದೆ ಇಂಥ ಬೆದರಿಕೆಗಳಿಗೆ ಹೆದರುವವನಲ್ಲ ಈ ಯಡಿಯೂರಪ್ಪ ಎಂದಿದ್ದು. ಇಂದು ಸಂಜೆ ನಾಲ್ಕುಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದಾರೆ.


ಒಂದು ಕಮೆಂಟನ್ನು ಬಿಡಿ