ದಕ್ಷಿಣ ವಲಯ ಪರಿಷತ್ ಸಭೆ: 22 ವಿಷಯಗಳ ಇತ್ಯರ್ಥ


18-09-2018 326

ಬೆಂಗಳೂರು: ದಕ್ಷಿಣ ವಲಯ ಪರಿಷತ್ ಸಭೆ ಅತ್ಯಂತ ಯಶಸ್ವಿಯಾಗಿದ್ದು, 27 ವಿಷಯಗಳ ಪೈಕಿ 22 ವಿಷಯಗಳನ್ನು ಚರ್ಚಿಸಿ ಇತ್ಯರ್ಥ ಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ 28ನೇ ದಕ್ಷಿಣ ವಲಯ ಪರಿಷತ್ತು ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಶಸ್ವಿಯಾಗಿ ಸಭೆ ನಡೆಸಲಾಗಿದ್ದು, 22 ಅಂಶಗಳನ್ನು ಇತ್ಯರ್ಥ ಪಡಿಸಲಾಗಿದೆ. ಮುಂದಿನ ಸಭೆ ತಮಿಳುನಾಡಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಮೀನುಗಾರರಿಗೆ ಬಯೋ ಮೆಟ್ರಿಕ್ ಕಾರ್ಡ್ ವಿತರಣೆ, ಮೀನುಗಾರರ ಭದ್ರತೆ, ಪ್ರವಾಸೋದ್ಯಮ ರೈಲು, ನವೀಕರಿಸಬಹುದಾದ ಇಂಧನದ ಸದ್ಬಳಕೆ, ಪುದುಚೇರಿಯಲ್ಲಿ ಹೊಸ ಏರ್ ಪೋರ್ಟ್ ನಿರ್ಮಾಣ, ಕೃಷ್ಣಾ ನದಿಯಿಂದ ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಕೆ, ಪೊಲೀಸ್ ಇಲಾಖೆ ಆಧುನೀಕರಣ, ಕರಾವಳಿ ರಾಜ್ಯಗಳ ಮೀನುಗಾರರ ವಿಚಾರ, ಎಲ್ ಪಿಜಿ ಗೋಡೌನ್ ನಿವೇಶನ ಯೋಜನೆಗಳಿಗೆ ಎನ್.ಒ.ಸಿ ನೀಡುವ ಬಗ್ಗೆ ಸುದೀರ್ಘ ಸಮಾಲೋಚನೆ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಇಂದು ನಡೆದ ಸಭೆಯಲ್ಲಿ ಐದು ಅಂಶಗಳ ಬಗ್ಗೆ ಇತ್ಯರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಪುದುಚೇರಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧದ ಬಿಕ್ಕಟ್ಟು ಇತ್ಯರ್ಥ ಪಡಿಸಲು ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ರಾಜ್ಯದ ಭೂ ಪ್ರದೇಶದ ಅಗತ್ಯ ಇದ್ದು, ಈ ಸಂಬಂಧ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಇನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮಧ್ಯೆ ಇರುವ ಪುಲಿಕಾಟ್ ಕೆರೆ ಬಿಕ್ಕಟ್ಟು ಇತ್ಯರ್ಥ ಕಾಣುವಲ್ಲಿ ವಿಫಲವಾಗಿದೆ. ಮೀನುಗಾರಿಕೆ ಹಕ್ಕು ವಿಚಾರವಾಗಿ ಎರಡೂ ರಾಜ್ಯಗಳ ಮಧ್ಯೆ ಬಿಕ್ಕಟ್ಟು ಏರ್ಪಟ್ಟಿದೆ. ಶೇಷಚಲಂ ಬೆಟ್ಟದಿಂದ ರಕ್ತ ಚಂದನ ಅಕ್ರಮ ಸಾಗಾಟ ವಿಚಾರವಾಗಿ ಅಂತಿಮ ನಿರ್ಧಾರಕ್ಕೆ ಬರಲು ಈ ಸಭೆಯಲ್ಲಿ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚಿಸಲು ಸಭೆಯಲ್ಲಿ


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rajnath singh Tamilnadu ಸಮಿತಿ ಆಂಧ್ರಪ್ರದೇಶ