ನಟೋರಿಯಸ್ ರೌಡಿ ಸಂಜಯ್ ಅಲಿಯಾಸ್ ಜಂಗ್ಲಿ ಅರೆಸ್ಟ್


18-09-2018 341

ಬೆಂಗಳುರು: ದರೋಡೆ, ಸುಲಿಗೆ, ಅಪಹರಣ, ಕೊಲೆ, ಕೊಲೆಯತ್ನ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ಕುಖ್ಯಾತ ರೌಡಿ ಸಂಜಯ್ ಅಲಿಯಾಸ್ ಜಂಗ್ಲಿಯನ್ನು ಗೂಂಡಾ ಕಾಯ್ದೆಯಡಿ ನಂದಿನಿ ಲೇಔಟ್ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಜೈ ಭುವನೇಶ್ವರಿ ನಗರದ ಜಂಗ್ಲಿ (23) 2012ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು, ಕೊಲೆ, ಸುಲಿಗೆ, ಕೊಲೆಯತ್ನ, ದರೋಡೆ, ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದ ನಂತರವು ಅಪರಾಧ ನಡೆಸುತ್ತಿದ್ದ. ಈತನ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು.

ಅಪರಾಧ ಕೃತ್ಯಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರವೂ ಮತ್ತೆ ಅಪರಾಧ ಪ್ರಕರಣಗಳನ್ನು ನಡೆಸುತ್ತಿದ್ದ ಜಂಗ್ಲಿ, ಸಾರ್ವಜನಿಕರಲ್ಲಿ ಭಯ ಭೀತಿ ಉಂಟುಮಾಡುತ್ತಿದ್ದ. ಇತ್ತೀಚೆಗೆ ಜಯ ಪ್ರಕಾಶ್ ಬನ್ಸಾಲ್ ಎಂಬುವವರನ್ನು ಹಣಕ್ಕಾಗಿ ಅಪಹರಿಸಿದ್ದನು. ಪ್ರಕರಣ ದಾಖಲಿಸಿ ಜಂಗ್ಲಿಯನ್ನು ಬಂಧಿಸಲಾಗಿತ್ತು. ಈತನ ಕೃತ್ಯಗಳನ್ನು ಗಮನಿಸಿ, ಗೂಂಡಾ ಕಾಯ್ದೆ ದಾಖಲಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rowdy Goonda Act ಗಮನಿಸಿ ಗೂಂಡಾ ಕಾಯ್ದೆ