‘ಅದೃಷ್ಟದಿಂದ‌ ಸಿಎಂ ಆಗಿದ್ದಾರೆ, ಅದೃಷ್ಟ ಖಾಲಿಯಾದರೆ ಇಳಿಯುತ್ತಾರೆ’


12-09-2018 430

ಚಿಕ್ಕಮಗಳೂರು: ‘ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಸ್ಫೋಟಗೊಂಡರೆ ಸರ್ಕಾರ ಪತನವಾಗಲಿದೆ’ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ‘ಸಮನ್ವಯ ಸಮಿತಿ ಅಧ್ಯಕ್ಷರ ಪತ್ರದಿಂದ ಅವರಿಗಿರೋ ನೋವು, ಆಕ್ರೋಶ ಅರ್ಥವಾಗುತ್ತದೆ. ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್-ಜೆಡಿಎಸ್ ನಲ್ಲಿರುವವರಿಗೆ ಸಮಾಧಾನವಿಲ್ಲ. ಸರ್ಕಾರ ಉಳಿಸಿಕೊಳ್ಳುವ ಕೆಲಸ‌ ನಮ್ಮದಲ್ಲ, ಈ ಸರ್ಕಾರಕ್ಕೆ‌ ಸೈದ್ಧಾಂತಿಕ ಬದ್ಧತೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ಗೆದ್ದ ಸ್ಥಾನಗಳಲ್ಲಿ ಶೇ.70ರಷ್ಟು‌ ಕಾಂಗ್ರೆಸ್ ವಿರುದ್ಧ ಗೆದ್ದದ್ದು, ಸಿದ್ದರಾಮಯ್ಯನ ಬೆಳೆಸಿದ ದೇವೇಗೌಡರೇ ಪಶ್ಚಾತ್ತಾಪದ ಮಾತನಾಡಿದ್ದರು. ಅವರು ಕೆಟ್ಟವರೆಂದು ಹೇಳಿ ಅವರ ವಿರುದ್ಧ ಓಟು ಪಡೆದವರು, ಈಗ ಮಾಡಿದ್ದೇನು, ಯಾರ ಜೊತೆ ಸೇರಿದ್ದಾರೆ. ಸರ್ಕಾರ ಇರುತ್ತೆಂದು ಕಾಂಗ್ರೆಸ್ಸಿರಿಗೆ ಆಸೆ ಇಲ್ಲ, ದಳದವರಿಗೆ‌ ನಂಬಿಕೆ ಇಲ್ಲ, ನಾವು ಬಿಜೆಪಿಗೆ ರಾಜಯೋಗ ಬರಲೆಂದು ಬಯಸಲ್ಲ, ಭಾರತಕ್ಕೆ ಬರಲೆಂದು ಬಯಸುತ್ತೇವೆ ಎಂದರು.

‘ಸರ್ಕಾರ ಬೀಳಿಸಲು ಬಿಜೆಪಿ ಮುಂದಾಗಲ್ಲ, ಬಿದ್ದರೆ, ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ ಸುಮ್ಮನೆ ಕೂರಲ್ಲ ಎಂದು ಸರ್ಕಾರ ರಚಿಸುವ ವಿಷಯ ಪ್ರಸ್ತಾಪಿಸಿದ್ದಾರೆ. 37 ಸೀಟು ಗೆದ್ದಿರುವವರು ಸಿಎಂ ಆಗ್ತಾರಂದ್ರೆ ಸೋಶಿಯಲ್ ಜಸ್ಟೀಸ್ ಅಂತೀರೋ, ನ್ಯಾಚುರಲ್ ಜಸ್ಟೀಸ್ ಅಂತೀರೋ. ಅದೃಷ್ಟದಿಂದ‌ ಸಿಎಂ ಆಗಿದ್ದಾರೆ, ಅದೃಷ್ಟ ಖಾಲಿಯಾದ ಮೇಲೆ ಇಳಿಯುತ್ತಾರೆ ಎಂದು ನುಡಿದಿದ್ದಾರೆ ಶಾಸಕ ಸಿ.ಟಿ.ರವಿ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

C.T.Ravi politics ಜಸ್ಟೀಸ್ ನ್ಯಾಚುರಲ್