ಪೂಜೆ ತಡವಾಗಿದ್ದಕ್ಕೆ ಅರ್ಚಕನ ಮೇಲೆ ಹಲ್ಲೆ


10-09-2018 316

ಕೋಲಾರ: ದೇವಾಲಯದಲ್ಲಿ ಪೂಜೆ ತಡವಾಗಿದ್ದಕ್ಕೆ ಅರ್ಚಕರ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಉಳ್ಳೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭೂತಮ್ಮನ ದೇವಾಲಯದಲ್ಲಿ ಪೂಜೆ ತಡವಾಗಿದ್ದಕ್ಕೆ ದೇವಾಲಯದ ಅರ್ಚಕರಾದ ಚಂದ್ರಪ್ಪ, ಜಯಮ್ಮ, ನವೀನ್, ಗೋವಿಂದ ಮೂವರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಚಂದ್ರಪ್ಪ ಎಂಬುವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬವಾಗಿದ್ದು, ಅವರ ಪೂರ್ವಿಕರ ಕಾಲದಿಂದ ಈ ಕುಟುಂಬ ಗ್ರಾಮ ದೇವತೆ ಭೂತಮ್ಮನ ದೇವಾಲಯದಲ್ಲಿ ಅರ್ಚಕರಾಗಿದ್ದು, ಇಂದು ಪೂಜೆ ತಡವಾಗಿದ್ದಕ್ಕೆ ಉದ್ದೇಶ ಪೂರ್ವಕವಾಗಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಹಾಗೂ ಅವರ ಕುಟುಂಬದವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಾಳುಗಳು ಮಾಲೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Temple Poojary ಗಾಯಾಳು ಚಿಕಿತ್ಸೆ