'ಮೋದಿ ಫೆಸ್ಟ್'  ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಚಾಲನೆ !


02-06-2017 345

ಬೆಂಗಳೂರು :- ಕೇಂದ್ರ ಸರ್ಕಾರದ ಯೋಜನೆಗಳನ್ನು  ಬಿಂಬಿಸುವ 'ಮೋದಿ ಫೆಸ್ಟ್' ಕಾರ್ಯಕ್ರಮನ್ನು ಮಲ್ಲೇಶ್ವರಂನ ಸರ್ಕಾರಿ ಶಾಲೆಯ ಮೈದಾನದಲ್ಲಿ  ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, ಶಾಸಕ ಅಶ್ವತ್ ನಾರಾಯಣ ಸೇರಿದಂತೆ ಹಲವರು  ಭಾಗಿಯಾಗಿದ್ದರು.  ನಂತರ ಮಾತನಾಡಿದ ಸದಾನಂದ ಗೌಡರು, ಮೋದಿ ಫೆಸ್ಟ್ ಪ್ರಚಾರದ ಕೆಲಸ ಅಲ್ಲ. ಅನುಷ್ಟಾನಕ್ಕೆ ಒತ್ತು ಕೊಡುವ ಕೆಲಸ ,  ಸರ್ಕಾರದ ಯೋಜನೆಗಳನ್ನು  ಫಲಾನುಭವಿಗಳಿಗೆ ತಿಳಿಸುವ ಕೆಲಸವಿದು ಎಂದರು.  ಯೋಜನೆಗಳ ಅನುಷ್ಠಾನ ಮತ್ತು ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡರೆ ಮತ್ತಷ್ಟು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.  3 ವರ್ಷದ ಮೋದಿ ಸರ್ಕಾರದ ಯೋಜನೆಗಳನ್ನು ತಿಳಿಸುವ  ಕಾರ್ಯಕ್ರಮ ಇದು ಎಂದರು.