ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಲಿಂಬಾವಳಿ ತಿರುಗೇಟು


05-09-2018 272

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಮಗ 'ವಿಜಯೇಂದ್ರ, ಐಟಿ ಮುಖ್ಯಸ್ಥರನ್ನ ಭೇಟಿಯಾಗಿದ್ದಾರೆ, ಸರ್ಕಾರದ ವಿರುದ್ಧ ಐಟಿ ಇಲಾಖೆ ಬಳಸಿಕೊಳ್ಳಲು ಮುಂದಾಗಿದ್ದಾರೆ' ಎಂಬ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ, ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ತಿರುಗೇಟು ನೀಡಿದ್ದಾರೆ.

ಬಿಎಸ್ವೈ ನಿವಾಸದ ಬಳಿ ಮಾತನಾಡಿದ ಅವರು, ‘ತಾವು ನೆಟ್ಟಗಿದ್ದರೆ ಏನು ಸಮಸ್ಯೆ ಇದೆ. ಯಾವುದೇ ತನಿಖೆ ಎದುರಿಸಬಹುದು. ಕನ್ನಡದಲ್ಲಿ ಗಾದೆ ಮಾತಿದೆಯಲ್ಲ ‘ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ' ಅಂತ ಹಾಗೇನಾದದೂ ಇದ್ರೆ,‌ ಏನೋ ಇದೆ ಅಂತ ಅರ್ಥ. ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ, ತನಿಖೆ ಮಾಡಲಿ, ಯಾವುದೇ ತನಿಖೆ ಮಾಡಲಿ ತಾವು ಸಿದ್ಧ ಎಂದಿದ್ದಾರೆ.

ಐಟಿ ಮುಖ್ಯಸ್ಥ ಬಾಲಕೃಷ್ಣ ಅವರನ್ನು ಬಿಎಸ್ವೈ ಪುತ್ರ ಮಾತ್ರ ಅಲ್ಲ, ಸಿಎಂ ಭೇಟಿ ಮಾಡಬಹುದು, ನಾನು ಭೇಟಿ ಮಾಡಬಹುದು. ಅಷ್ಟಕ್ಕೂ ಮುಖ್ಯಮಂತ್ರಿ ಸಂಬಂಧಿಕರು ಭೇಟಿ ಮಾಡಿಲ್ವ, ಡಿಕೆ ಶಿವಕುಮಾರ್ ಸಂಬಂಧಿಕರು ಭೇಟಿ ಮಾಡಿಲ್ವ ಎಂದು ಟಾಂಗ್ ಕೊಟ್ಟಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Aravind Limbavali H.D.Kumaraswamy ಐಟಿ ಇಲಾಖೆ ಟಾಂಗ್