ವಿಧಾನಸೌಧದಲ್ಲಿ ಶಿಕ್ಷಣ ಸಚಿವರ ಮಾತು


05-09-2018 212

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ‘ಈ ಹಿಂದೆ ಶಿಕ್ಷಣ ಕೆಲವೇ ವರ್ಗದವರಿಗೆ, ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ ಕಾರಣಕ್ಕೆ ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ಕರೆಯಲಾಯ್ತು. 1835ರಲ್ಲಿ ಲಾರ್ಡ್ ಮೆಕಾಲೆ ಸಾರ್ವಜನಿಕ ನೀತಿ ಜಾರಿಗೆ ತಂದರು, ಅದ್ದರಿಂದ ಶಿಕ್ಷಣ ಸಾರ್ವತ್ರಿಕವಾಯ್ತು, ಅದರ ಕೀರ್ತಿ ಬ್ರಿಟಿಷರಿಗೆ ಸಲ್ಲಬೇಕು. ಅಂದು ಬ್ರಿಟಿಷರು ಸಾರ್ವಜನಿಕ ಶಿಕ್ಷಣ ನೀತಿ ಜಾರಿಗೆ ತರದೇ ಇದ್ದಿದ್ದರೆ ಯಾರೂ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ನಾನೂ ಕೂಡ ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟವರು ಸಾವಿತ್ರಿ ಬಾಯಿ ಫುಲೆ, ಶೂದ್ರ, ಅತಿ ಶೂದ್ರರಿಗೆ ಶಿಕ್ಷಣ ಅವಕಾಶ ಕಲ್ಪಿಸಿದವರು ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ. 1840ರಲ್ಲಿ ಪೂನಾದಲ್ಲಿ ಮೊದಲ ಹೆಣ್ಣುಮಕ್ಕಳ ಶಾಲೆ ಪ್ರಾರಂಭಿಸಿದ್ದರು ಎಂದು ಶಿಕ್ಷಕರ ದಿನಾಚರಣೆಯಾದ ಇಂದು ಈ ಮಾತುಗಳನ್ನಾಡಿದ್ದಾರೆ.

 


ಒಂದು ಕಮೆಂಟನ್ನು ಬಿಡಿ