ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ 10 ಲಕ್ಷ ರೂ. ಕಳ್ಳತನ


05-09-2018 228

ಬೆಂಗಳೂರು: ಮಲ್ಲೇಶ್ವರಂನ ಸಂಪಿಗೆ ರಸ್ತೆಯ ವಿಜಯಾ ಬ್ಯಾಂಕ್‍ಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ 7 ಮಂದಿಯ ಗ್ಯಾಂಗ್ ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು 10 ಲಕ್ಷ ರೂಗಳನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳ ಆಗಸ್ಟ್ 31ರಂದು ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಬಂದ ಏಳು ಮಂದಿ, ದುಷ್ಕರ್ಮಿಗಳು ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್ ಗೆ ಹೋಗಿದ್ದ ಖದೀಮರು ಅಲ್ಲಿದ್ದ ಹತ್ತು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

ಬಳಿಕ ಬ್ಯಾಂಕ್ ವಹಿವಾಟು ಅಂತ್ಯವಾದ ನಂತರ ಹತ್ತು ಲಕ್ಷ ಹಣ ಕಡಿಮೆಯಾಗಿತ್ತು. ಹಣದ ವಹಿವಾಟು ತನಿಖೆ ವೇಳೆ ಹಣ ಕಡಿಮೆಯಾಗಿದ್ದು ಬೆಳಕಿಗೆ ಬಂದಿದೆ. ಬ್ಯಾಂಕ್ ಸಿಸಿಟಿವಿ ಪರಿಶೀಲನೆ ನಡೆಸಿದ ಸಿಬ್ಬಂದಿ, ಈ ವೇಳೆ ಏಳು ಮಂದಿ ಅನುಮಾನಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಸ್‍ಸಿ ನಾಯಕ್ ದೂರು ದಾಖಲಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bank Looted ಮ್ಯಾನೇಜರ್ ವಂಚಕ