ಕೇವಲ ಒಂದು ಓಟ್ ಅಂತರದಲ್ಲಿ ಗೆದ್ದವರು


03-09-2018 248

ಬೀದರ್: ತೀವ್ರ ಕುತೂಹಲ ಕೆರಳಿಸಿದ್ದ ಹಳ್ಳಿಖೇಡ ಪುರಸಭೆ ಫಲಿತಾಂಶ ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಪುರಸಭೆ ಚುಕ್ಕಾಣಿ‌ 'ಕೈ' ಪಾಲಾಗಿದೆ. 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 99 ಅಭ್ಯರ್ಥಿಗಳು ಕಣದಲ್ಲಿದ್ದು, 14 ಕಾಂಗ್ರೆಸ್ ಅಭ್ಯರ್ಥಿಗಳು, 5 ಬಿಜೆಪಿ, ಜೆಡಿಎಸ್ 3 ಇತರೆ 1 ಜಯ ಸಾಧಿಸಿದೆ. ಹೀಗಿರುವಾಗಲೂ ಪುರಸಭೆ ಫಲಿತಾಂಶ ಕೆಲ ಘಟನೆಗಳಿಗೆ ಸಾಕ್ಷಿಯಾಯಿತು.

ಕೇವಲ ಒಂದು‌ ಓಟಿನಿಂದ ಗೆದ್ದ ಇಬ್ಬರು ಅಭ್ಯರ್ಥಿಗಳ: ಹೌದು ವಾರ್ಡ್ ನಂಬರ್ 2ರಲ್ಲಿ  ಪ್ರಿಯಾಂಕ ಮುರಳಿ 258 ಮತಗಳನ್ನ ಪಡೆದು ಕಾಂಗ್ರೆಸ್ ಅಭ್ಯರ್ಥಿ ಸಂಗೀತ ಶಾಮಣ್ಣಾ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಜಯ ಸಾಧಿಸಿದ್ದರೆ. ವಾರ್ಡ್ ನಂಬರ್ 21 ರಲ್ಲಿ ಹುರ್ಮತ್ ಬೇಗಂ ಕೂಡ 121 ಮತಗಳನ್ನು ಗಳಿಸಿ ಕೇವಲ ಒಂದು ಮತದ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿಜಯಲಕ್ಷಿ ವಿರುದ್ಧ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

voting local election ಮತ ಅಂತರ