ನಕಲಿ ಉದ್ಯೋಗ ಪತ್ರ ನೀಡಿ ವಂಚನೆ!


01-09-2018 229

ಬೆಂಗಳೂರು: ಐಟಿಸಿ ಕಾರ್ಖಾನೆಯಲ್ಲಿ ಉದ್ಯೊಗ ಕೊಡಿಸುವುದಾಗಿ ಹಣ ಪಡೆದು ಯುವಕರಿಗೆ ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ ನಡೆಸಿರುವ ವ ಐಟಿಸಿ ಉದ್ಯೋಗಿಯೊಬ್ಬರ ಪತ್ತೆಗೆ ಜಾಲಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಐಟಿಸಿ ಕಾರ್ಖಾನೆಯ ಉದ್ಯೋಗಿ ಚಂದ್ರಶೇಖರ್ ಉದ್ಯೋಗ ಕೊಡಿಸುವ ಹೆಸರಿನಲ್ಲಿ ವಂಚನೆ ನಡೆಸಿದ್ದಾರೆ ಎಂದು ನೀಡಿರುವ ದೂರು ದಾಖಲಿಸಿರುವ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿರುವ ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸಿ  ತನಿಖೆ ಕೈಗೊಂಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯಲ್ಲಿರುವ ಐಟಿಸಿ ಕಾರ್ಖಾನೆಯ ಉದ್ಯೋಗಿಯಾಗಿದ್ದ ಚಂದ್ರಶೇಖರ್ ಅವರಿಗೆ ಮೋಹನ್ ಕುಮಾರ್ ಎಂಬುವವರು ಪರಿಚಯವಾಗಿದ್ದರು. ಇನ್ನು ಮೋಹನ್ ಕುಮಾರ್ ತನ್ನ ಸಹೋದರ ರಘು ಎನ್ನುವವರಿಗೆ ಕೆಲಸ ಹುಡುಕುತ್ತಿದ್ದರು. ಈ ವೇಳೆ ಮೋಹನ್‍ಗೆ ಪರಿಚಯವಾಗಿರುವ ಚಂದ್ರಶೇಖರ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಆರ್ಜಿ ಹಾಕಿ  ಕೆಲಸ ಕೊಡಿಸುತ್ತೇನೆ ಎಂದಿದ್ದ. ನಂತರ ತಲಾ 2.5 ಲಕ್ಷ ರೂಪಾಯಿಗಳಂತೆ ಒಟ್ಟು 7.5 ಲಕ್ಷ ರೂ. ಹಣ ನೀಡುವಂತೆ ಹೇಳಿ ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿದ್ದಾನೆ. ನಂತರ ಚಂದ್ರಶೇಖರ್‍ ನಿಂದ ಉದ್ಯೋಗ ನೇಮಕಾತಿ ಪತ್ರ ಪಡೆದ ರಘು ಕೆಲಸಕ್ಕೆ ತೆರಳಿದಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ಇನ್ನು ರಘುಗೆ ಮಾತ್ರವಲ್ಲದೇ ಹರ್ಷಿತ್, ಕಿರಣ್ ಎಂಬ ಇನ್ನಿಬ್ಬರು ಯುವಕರಿಗೆ ಉದ್ಯೋಗ  ನೇಮಕಾತಿ ಪತ್ರ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ನಾಪತ್ತೆಯಾಗಿದ್ದು ಮೋಸ ಹೋದ ಯುವಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

fake job ಜಾಲಹಳ್ಳಿ ನಾಪತ್ತೆ