ಮತದಾನದ ವೇಳೆ ಕೊಪ್ಪಳದ ಮೂರು ಬೂತ್ ಗಳಲ್ಲಿ ಗಲಾಟೆ!


31-08-2018 205

ಕೊಪ್ಪಳ: ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಶಾಂತಿಯುತವಾಗಿ ಮತದಾನವೂ ನಡೆಯುತ್ತಿತ್ತು, ಆದರೆ, ಹಮಾಲರ ಕಾಲೋನಿಯಲ್ಲಿ ಕಾಂಗ್ರೆಸ್-ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ವಾರ್ಡ್ ನಂ 3 ರ ಬೂತ್ ನಂ 4 ,5, 6 ರಲ್ಲಿ ಮತದಾನದ ವೇಳೆ ಗಲಾಟೆ ನಡೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಸಿಟಿಂಗ್ ಕಾರ್ಡ್ ನೀಡಿ ಮತ ಹಾಕಲು ಹೇಳುತ್ತಿದ್ದಾರೆಂದು, ಮತದಾರಿಗೆ ಆಮಿಷ ನೀಡಿ ಮತ ಹಾಕಲು ಒತ್ತಾಯ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ತಕರಾರು ತೆಗೆದಿದ್ದಾರೆ. 3ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಅಮಜದ್ ಪಾಟೀಲ್ ವಿಸಿಟಿಂಗ್ ಕಾರ್ಡ್ ನೀಡಿ ಆಮಿಷ ಒಡ್ಡಿದ್ದಾರೆ ಎಂದು ಮೂರೂ ಪಕ್ಷದವರು ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.  ಇದೇ ವೇಳೆ ಮತಗಟ್ಟೆ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

election Koppal ಕಾರ್ಯಕರ್ತ ಸ್ಥಳೀಯ ಸಂಸ್ಥೆ