‘ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಪತನವಾಗಲ್ಲ’


29-08-2018 228

ಶಿವಮೊಗ್ಗ: ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪೂರ್ಣಾವಧಿವರೆಗೂ ಉಳಿಯಲಿದೆ, ಎಂದು ಜೆಡಿಎಸ್‌ ರಾಜ್ಯ ಯುವ ಘಟಕ ಅಧ್ಯಕ್ಷ‌ ಹಾಗು ಮಾಜಿ ಶಾಸಕ ಮಧುಬಂಗಾರಪ್ಪ‌ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಧುಬಂಗಾರಪ್ಪ‌ ಹೆಚ್.ವಿಶ್ವನಾಥ್ ಅವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡಿರೋದು ಸ್ವಾಗತಾರ್ಹ ಎಂದಿದ್ದಾರೆ.

‘ಯಾವುದೇ ಕಾರಣಕ್ಕು ಈ ಸರ್ಕಾರ ಬೀಳೋದಿಲ್ಲಾ. ವಿರೋಧಿಗಳಿಗೆ ಇನ್ನೂ ಐದು ವರ್ಷ ಕೇವಲ ಸರ್ಕಾರ ಬೀಳುತ್ತೆ ಅಂತ ಹೇಳೋದೆ ಕೆಲಸವಾಗಿರುತ್ತೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಮುಂದಿನ ಲೋಕಸಭೆ ಚುನಾಣೆಗೆ ಬೇಕಾಗಿರೋ ತಯಾರಿಯನ್ನ ಪಕ್ಷ ಮಾಡಿಕೊಳ್ಳತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗುವ ಸಾಧ್ಯತೆಯಿದೆ. ರಾಷ್ಟ್ರಮಟ್ಟದಲ್ಲಿಯೂ ಮಾಯಾವತಿ, ಮುಲಾಯಂ ಸಿಂಗ್ ಸೇರಿದಂತೆ ಬಹುತೇಕರು ಈ ನಿಟ್ಟಿನಲ್ಲಿ ಯೋಚನೆಗಳು ಪ್ರಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಆಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಷಯದ ಬಗ್ಗೆ ಪಕ್ಷದ ಪ್ರಮುಖರು ಹಾಗೂ ಹಿರಿಯರು ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಜೆಡಿಎಸ್ ವರಿಷ್ಠ ದೇವೇಗೌಡರು ‘ಮೈತ್ರಿಯಾಗುತ್ತೋ ಇಲ್ಲವೂ ಅದು ಆಮೇಲಿನ ವಿಷಯ ಮೊದಲು ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧವಿರಲು’ ಸೂಚಿಸಿದ್ದಾರೆ ಎಂದು ತಿಳಿಸಿದರು.

ವಿಧಾನಸಭೆ ಚುನಾಣೆಯಲ್ಲಿ ನನ್ನ ಸೋಲಿಗೆ ಕಾರಣ ಎಲ್ಲೋ ಒಂದು ಕಡೆ ಹಿಂದುತ್ವ ಕೆಲಸಾ ಮಾಡಿರಬಹುದು ಈ ವಿಷಯದ ಬಗ್ಗೆ ನಾನು ಬಹಿರಂಗವಾಗಿ ಹೇಳಲಾರೆ. ಕಾಗೋಡು ತಿಮ್ಮಪ್ಪನವರೇ ಸೋಲುತ್ತಾರೆ ಅಂದ್ರೆ ನನ್ನ ಸೋಲು ದೊಡ್ಡದಲ್ಲ. ಹಿಂದೆ ಇದ್ದ ಆರ್.ಎಸ್.ಎಸ್ ಗೂ ಈಗಿನ ಆರ್.ಎಸ್.ಎಸ್ ಗೂ ವ್ಯತ್ಯಾಸವಿದೆ. ಸುಳ್ಳನ್ನೇ ನಿಜಮಾಡೋದು ಬಿಜೆಪಿ ಕೆಲಸ. ಚುನಾವಣೆಯಲ್ಲಿ ಸೋಲು-ಗೆಲುವು ಏನೇಯಾಗಲಿ ನಾವು ಶಿವಮೊಗ್ಗದವರು ಮತ್ತೆ ಇಲ್ಲಿಂದಲೇ ಪ್ರಾರಂಭ ಮಾಡಬೇಕು. ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.


ಒಂದು ಕಮೆಂಟನ್ನು ಬಿಡಿ