ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ: ಸಿದ್ದರಾಮಯ್ಯ


29-08-2018 190

ಬಾಗಲಕೋಟೆ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ, ಇದಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾದಾಮಿ ಪಟ್ಟಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ತಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಆಗುತ್ತೇನೆಂದು ಹೇಳಿದ್ದೇನೆ, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು. ಅದಲ್ಲದೆ ಯಡಿಯೂರಪ್ಪ ಸಿಎಂ ಆಗುತ್ತೇನೆಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನ ಕೆಲ ಶಾಸಕರು ಮತ್ತೆ ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಹೇಳಿಕೆ ವಿಚಾರವಾಗಿ, ‘ತಮ್ಮ ಶಾಸಕರು ನಮ್ಮ ಮೇಲಿನ ಅಭಿಮಾನದಿಂದ ಹೀಗೆ ಹೇಳುತ್ತಿದ್ದಾರೆ, ಜೆಡಿಎಸ್ ನವರು ಯಾರೂ ಹೇಳುತ್ತಿಲ್ಲವಲ್ಲ ಇದರಿಂದ ಸಿಎಂ ಕುಮಾರಸ್ವಾಮಿಗೆ ಇರಿಸು ಮುರಿಸಾಗೋದಿಲ್ಲ ಎಂದರು’. ‘ಕಾಂಗ್ರೆಸ್ ನವರು ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ, ಬಿಜೆಪಿ ಪಕ್ಷದವರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂಬ ಶಾಸಕ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಸಿದ್ದು, ಶ್ರೀರಾಮುಲುಗೆ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಅಂದರೆ ಗೊತ್ತಿಲ್ಲ. ಬಳ್ಳಾರಿ, ಮೊಳಕಾಲ್ಮೂರಲ್ಲಿ ಏನು ಮಾಡಿದ್ದಾರೆ ಹೇಳಿ? ಅಭಿವೃದ್ಧಿ ಏನೆ ಇದ್ದರೂ ಕಾಂಗ್ರೆಸ್ ನಿಂದ ಮಾತ್ರ ಎಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah sriramulu ಸಂಸ್ಕೃತಿ ಅಭಿವೃದ್ಧಿ