ಗ್ರಾಮ ಪಂಚಾಯತಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ


28-08-2018 315

ಬೆಂಗಳೂರು: ಸರ್ಕಾರಿ ಆದೇಶದ ಪ್ರಕಾರ ತಮಗೆ ವೇತನ ನೀಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಆದೇಶದ ವೇತನ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ನೌಕರರು ಹೋರಾಟ ನಡೆಸಿದ್ದು ಸುಮಾರು 2000ಕ್ಕೂ ಹೆಚ್ಚು ನೌಕರರಿಂದ ರೈಲ್ವೇ ನಿಲ್ದಾಣ ದಿಂದ ಫ್ರಿಡಂ ಪಾರ್ಕ್ ವರೆಗೂ ಬೃಹತ್ ಜಾಥಾ ನಡೆಸಲಾಯಿತು.

ಸರ್ಕಾರ ನಿಧಿಯಿಂದ ವೇತನವನ್ನು ನೀಡಲು ಸರ್ಕಾರ ಮಾರ್ಚ್ 2ರಂದು ಆದೇಶ ಮಾಡಿತ್ತು. ಆದರೂ ನೀಡಿಲ್ಲ. 51 ಸಾವಿರ ನೌಕರರಿಗೆ ವೇತನ ನೀಡುವ ಆದೇಶ ಹೊರಡಿಸಿತ್ತು. ಇದೀಗ 18 ಸಾವಿರ ನೌಕರರನ್ನು ವೇತನದಿಂದ ಕೈ ಬಿಟ್ಟಿದೆ. ಇದರಿಂದ ಕಸಗೂಡಿಸುವವರು, ವಾಟರ್ ಮನ್ ಗಳು, ಜವಾನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್ ಗಳಿಗೆ ಸಿಗುತ್ತಿದ್ದ ಗ್ರೇಡ್-2 ಕಾರ್ಯದರ್ಶಿ ಬಡ್ತಿಯನ್ನು ಪುನ: ಸಿಗುವಂತೆ ಸೂಕ್ತ ಆದೇಶ ಹೊರಡಿಸಬೇಕು.

ಗ್ರಾಮ ಪಂಚಾಯತ್ ನೌಕರರಿಗೆ ಪೆನ್ಷನ್, ವೈದ್ಯಕೀಯ ವೆಚ್ಚ ,ಗ್ರಾಚ್ಯುಟಿಗಳು ಸಿಗುವಂತೆ ಕ್ರಮವಹಿಸಬೇಕು. ಇವೆಲ್ಲ ಪೂರ್ಣ ಮಾಡಬೇಕು  ಹೀಗಾಗಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಅಂತ ತಿಳಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಾಟಗಾರರು ಆಗಮಿಸಿದ್ದು, ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

gram panchayath wage ಮುಷ್ಕರ ವೈದ್ಯಕೀಯ