'ರೈತರಿಗೂ ನೆರವಾಗುತ್ತಿದೆ ಜೆಎಸ್ಎಸ್ ಸಂಸ್ಥೆ'


28-08-2018 314

ಮೈಸೂರು: ಸುತ್ತೂರು ಕ್ಷೇತ್ರ ಶೈಕ್ಷಣಿಕ ಸೇವಾ ವಲಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದು, ಸಶಕ್ತ ಗ್ರಾಮೀಣ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಮಠ, ಶಿಕ್ಷಣ ವಲಯದಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಮೈಸೂರು ಸಮೀಪದ ಸುತ್ತೂರು ಮಠದಲ್ಲಿಂದು ನಡೆದ ಜೆ.ಎಸ್.ಎಸ್.ಗುರುಕುಲ ಉದ್ಘಾಟನೆ ಹಾಗೂ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 103ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಶಿಕ್ಷಣ, ಸಂಸ್ಕೃತಿ, ಪರಂಪರೆಗೆ ಇಡೀ ವಿಶ್ವದಲ್ಲೇ ಜೆ.ಎಸ್.ಎಸ್. ಸಂಸ್ಥೆ ಹೆಸರುವಾಸಿಯಾಗಿದೆ ಎಂದರು. ಕೃಷಿ, ವಿಜ್ಞಾನ ಕೇಂದ್ರಗಳನ್ನು ತೆರೆಯುವ ಮೂಲಕ ಜೆ.ಎಸ್.ಎಸ್. ರೈತರಿಗೂ ನೆರವಾಗುತ್ತಿದೆ. ಭಾರತದ ಸಂಸ್ಕೃತಿ, ಪರಂಪರೆಗೆ ಭವ್ಯ ಇತಿಹಾಸವಿದ್ದು, ಅದನ್ನು ಮನಗಂಡು, ನಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಒತ್ತು ನೀಡಬೇಕಾಗಿದೆ ಎಂದು ಅವರು ಹೇಳಿದರು.

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಚಿತ್ರಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸುತ್ತೂರು ಕ್ಷೇತ್ರಕ್ಕೆ ದೇಶದಲ್ಲಿ ವಿಶೇಷ ಸ್ಥಾನಮಾನವಿದೆ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಗಳು ಸಹಸ್ರಾರು ಗ್ರಾಮೀಣ ಮಕ್ಕಳಿಗೆ ಅಕ್ಷರ, ಹಾಗೂ ಅನ್ನ ದಾಸೋಹ ಸಿಗುವಂತೆ ಮಾಡಿದ್ದಾರೆ. ಮಠ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿಯಾಗಿದೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suttur mutt Venkaiah Naidu ಸಾಮಾಜಿಕ ಆರ್ಥಿಕ