'ಸರ್ಕಾರ ಪತನ ಮಾಡಿ ಸಿಎಂ ಆಗ್ತೀನಿ ಅಂದಿಲ್ಲ ಸಿದ್ದರಾಮಯ್ಯ'


28-08-2018 198

ಹುಬ್ಬಳ್ಳಿ: ‘ಹೆಚ್.ಡಿ.ಕೆ. ಸರ್ಕಾರ ಬೀಳಿಸಲು ಯಾರ್ಯಾರು ಷಡ್ಯಂತ್ರ ಮಾಡುತ್ತಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹಾವೇರಿಗೆ ಪ್ರಯಾಣ ಬೆಳೆಸಿದ್ದ ಸಚಿವ ಜಮೀರ್ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರಿಂದ ಹಾವೇರಿಗೆ ಪ್ರಚಾರಕ್ಕೆ ತೆರಳಿದ್ದೇನೆ ಎಂದರು.

‘ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮುಂದಿನ ಏಲೆಕ್ಷನ್ ನಲ್ಲಿ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದಾರೆ. ಅವರೇನು ಕುಮಾರಸ್ವಾಮಿ ಸರ್ಕಾರ ಬಿಳಿಸಿ ಸಿಎಂ ಆಗುತ್ತೀನಿ ಅಂದಿಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು, ಯಾವತ್ತಿದ್ದರು ಅವರೇ ನಮ್ಮ‌ ನಾಯಕರು ಎಂದರು. ಸಿದ್ದರಾಮಯ್ಯನವರ ಯುರೋಪ್ ಪ್ರವಾಸ ಪೂರ್ವ ನಿಗದಿಯದ್ದು, ಅದರೆಲ್ಲೇನು ವಿಶೇಷತೆ ಇಲ್ಲ. ಅವರ ಜೊತೆ ಸಚಿವರು ಹೋಗೋ ವಿಚಾರವಾಗಿ, ನನ್ನನ್ನು ಕರೆದಿದ್ದರೆ ನಾನೂ ಹೋಗುತ್ತಿದ್ದೆ. ನನ್ನ ಕರೆದಿಲ್ಲ ಹಾಗಾಗಿ ನಾನು ಹೋಗುತ್ತಿಲ್ಲ' ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

zameer ahmed khan siddaramaiah ಪ್ರವಾಸ ವಿಶೇಷತೆ