ಕಾರ್ಯಕರ್ತನ ಕೈಯಿಂದ ಚಪ್ಪಲಿ ತರಿಸಿಕೊಂಡಿದ್ದ ಶಾಸಕ!


23-08-2018 333

ಕೊಪ್ಪಳ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆದಿದ್ದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಭಾರೀ ಸದ್ದು ಮಾಡುತ್ತಿರುವ ಈ ವಿಡಿಯೋ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಘಟನೆ ಏನೆಂದರೆ, ಕೊಪ್ಪಳದ ಗಂಗಾವತಿಯ ಈಗಿನ ಶಾಸಕರಾದ ಪರಣ್ಣ ಮುನವಳ್ಳಿ ಅವರು ಚುನಾವಣಾ ಪ್ರಚಾರದ ವೇಳೆ ಸಾಮಾನ್ಯ ಕಾರ್ಯಕರ್ತನ ಕೈಯಿಂದ ಚಪ್ಪಲಿ ತರಿಸಿಕೊಂಡು ಅಮಾವವೀಯವಾಗಿ ವರ್ತಿಸಿದ್ದಾರೆ. ಘಟನೆ ನಡೆದು ತಿಂಗಳುಗಳೇ ಕೆಳೆದಿದ್ದು, ಇದೀಗ ವಿಡಿಯೋ ಹರಿಬಿಟ್ಟಿದ್ದಾರೆ. ಸಭ್ಯತೆಯ ಎಲ್ಲೆ ಮೀರಿ ನಡೆದುಕೊಂಡಿರುವ ಬಿಜೆಪಿ ಎಂಎಲ್ಎ ವಿರುದ್ಧ  ಆಕ್ರೋಶ ವ್ಯಕ್ತವಾಗುತ್ತಿದೆ. ಜನರ ಸೇವೆ ಮಾಡುತ್ತೇವೆ ಎಂದು, ಜನರಿಂದಲೇ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕರ ವರ್ತನೆಗೆ ಹಲವರು ಕೆಂಡಕಾರಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Gangavati paranna munavalli ವೈರಲ್ ಎಂಎಲ್ಎ