ಇಂಡೋ-ನೇಪಾಳಿ ಹಬ್ಬದ ನಂತರ ವಿವಿ ಕ್ರೀಡಾಂಗಣ ಅದ್ವಾನ!


22-08-2018 327

ಬೆಂಗಳೂರು: ನಗರದ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಮದ್ಯದ ಖಾಲಿ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದ್ದು ಅದನ್ನು ತೆರವುಗೊಳಿಸಲು  ಮುಂದಾಗಿದ್ದಾರೆ.

ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಮಂಗಳವಾರ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.

ಇತರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನು ಬಾಡಿಗೆಗೆ ನೀಡುವ ನಿಯಮವಿಲ್ಲ. ಆದರೆ, ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

central college Bangalore university ಕ್ರೀಡಾಂಗಣ ಬಾಟಲಿ