‘ರಾಜ್ಯ ಬಿಜೆಪಿ ಸಂಸದರು ಈಗಲಾದರೂ ನ್ಯಾಯ ಕೊಡಿಸಲಿ’


21-08-2018 305

ಬೆಂಗಳೂರು: ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರದಲ್ಲಿ  ನೆರೆ ಸಮಸ್ಯೆಗಳ ಬಗ್ಗೆ ವರದಿ ನೀಡಲು ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, 10ದಿನಗಳ ಒಳಗೆ ಪದಾಧಿಕಾರಿಗಳು ವರದಿ ನೀಡುತ್ತಾರೆ, ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಇದೇ ತಿಂಗಳ 24ರಿಂದ ರಾಜ್ಯ ಪ್ರವಾಸ ಮಾಡಲಿದ್ದೇನೆ, ಮೈಸೂರಿನಿಂದ ರಾಜ್ಯ ಪ್ರವಾಸ ಆರಂಭವಾಗಲಿದೆ. ಉಡುಪಿ, ಮಂಗಳೂರು, ದಾವಣಗೆರೆ, ಧಾರವಾಡದ ಕಡೆ ಪ್ರವಾಸ ಮಾಡಲಿದ್ದೇವೆ ಎಂದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ ಈ ಬಗ್ಗೆ ಸಂಪೂರ್ಣ ನಂಬಿಕೆ ಇದೆ' ಎಂದಿದ್ದಾರೆ.

‘ಭೀಕರ ಪ್ರವಾಹ ಪೀಡಿತ ಕೊಡಗಿಗೆ ಪ್ರಧಾನಿ ಮೋದಿ ಬರುವ ಪ್ರಯತ್ನ ಮಾಡಿದ್ದರೆ ಒಳ್ಳೆಯದು, ಬರೋದಕ್ಕೆ ಆಗಿಲ್ಲ ಅಂದರೆ ಹೆಚ್ಚಿನ ನೆರವನ್ನಾದರೂ ಕೊಡಬಹುದಿತ್ತು, ಈಗಾಗ್ಲೆ ಸಿಎಂ ಕುಮಾರಸ್ವಾಮಿ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಿಶೇಷ ಪ್ರಕರಣವಾಗಿ ಪರಿಗಣಿಸಿ ಪ್ರಧಾನಿಗಳು ರಾಜ್ಯಕ್ಕೆ ಹೆಚ್ಚಿನ ನೆರವನ್ನು ನೀಡಬೇಕು, ಬಿಜೆಪಿ ಸಂಸದರಿಂದ ಇಷ್ಟು ವರ್ಷ ನ್ಯಾಯ ಕೊಡಿಸೋಕೆ ಆಗಿಲ್ಲ. ಕೊಡಗಿನಲ್ಲಿ ಬಿಜೆಪಿಯವರೇ ಗೆದ್ದಿದ್ದಾರೆ. ರಾಜ್ಯ ಬಿಜೆಪಿ ಸಂಸದರು ಈಗಲಾದರೂ ನ್ಯಾಯ ಕೊಡಿಸಲಿ, ಸ್ವಲ್ಪ ಆದರೂ ತಮ್ಮ ಕರ್ತವ್ಯವನ್ನು ಸಂಸದರು ನಿಭಾಯಿಸಲಿ' ಎಂದ ದಿನೇಶ್ ಗುಂಡೂರಾವ್ ಚಾಟಿ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Madikeri Dinesh Gundu Rao ಪ್ರವಾಹ ಬಿಜೆಪಿ ಶಾಸಕ