ಯಶವಂತಪುರದಲ್ಲಿ ನೈಜೀರಿಯನ್ ಪ್ರಜೆ ಬಂಧನ


18-08-2018 289

ಬೆಂಗಳೂರು: ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರದ ಬಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ನೈಜೀರಿಯಾದವನಾಗಿದ್ದು ಮುಂಬೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿರುವುದಾಗಿ ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಂಧಿತನ ಬಳಿ ಇದ್ದ ಬ್ಯಾಗ್‍ನಲ್ಲಿ ಇದ್ದ ಬಾಟಲಿಯಲ್ಲಿ ಎಲ್‍ಎಸ್‍ಡಿ ಎಂಬ ಮಾದಕ ದ್ರವ್ಯವಿದ್ದು, ಸುಮಾರು 4.1ಗ್ರಾಂ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ಮುಂಬೈ, ಕೇರಳ, ದೆಹಲಿಯಲ್ಲಿನ ಡ್ರಗ್‍ಮಾಫಿಯಾ ಗ್ಯಾಂಗ್‍ಗಳ ಜತೆ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Drug mafia Nigerian ಅಕ್ರಮ ಮಾದಕ ದ್ರವ್ಯ