ಪ್ರವಾಹ: 3 ದಿನ ಶೌಚಾಲಯದಲ್ಲೇ ಇದ್ದು ಬದುಕುಳಿದ ಕಾರ್ಮಿಕ


17-08-2018 239

ಚಿಕ್ಕಮಗಳೂರು: ತುಂಗಾ ನದಿ ಪ್ರವಾಹದಲ್ಲಿ ಸಿಲುಕಿ ಕಳೆದ 3 ದಿನಗಳಿಂದ ಶೌಚಾಲಯದಲ್ಲೇ ಸಿಕ್ಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಲಾಗಿದೆ. ಘಟನೆ ಶೃಂಗೇರಿಯಲ್ಲಿ ಬೆಳಕಿಗೆ ಬಂದಿದೆ. ವಿನೋದ್ ಮಂಡ್ಲೆ ಎಂಬಾತ ಶೌಚಾಲಯದಲ್ಲಿ ಮೂರು ದಿನಗಳು ಕಳೆದ ವ್ಯಕ್ತಿ. ಶೃಂಗೇರಿಯ ಗಾಂಧಿ ಮೈದಾನದಲ್ಲಿರುವ ಶೌಚಾಲಯಕ್ಕೆ ಮೂರು ದಿನಗಳ ಹಿಂದೆ ಹೋಗಿದ್ದಾಗ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಬರೋಬ್ಬರಿ ಮೂರು ದಿನಗಳ ಕಾಲ ಅಲ್ಲೇ ಇದ್ದ ಅವರನ್ನು ಇಂದು ಕೇಂದ್ರ ರಕ್ಷಣಾ ಸಿಬ್ಬಂದಿ ಮತ್ತು ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಈತ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.  ಶೌಚಾಲಯದಲ್ಲೇ ಮೂರು ದಿನಗಳ ಕಾಲ ಇದ್ದು, ಇದೀಗ ಪ್ರಾಣಾಯಾಪದಿಂದ ಪಾರಾಗಿರುವುದು ಆಶ್ವರ್ಯವೇ ಸರಿ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

flood survive ಶೌಚಾಲಯ ಶೃಂಗೇರಿ