ಜನಸಾಗರದ ನಡುವೆ 'ಅಜಾತಶತ್ರು’ ಅಂತಿಮ ಯಾತ್ರೆ


17-08-2018 222

ನವದೆಹಲಿ: ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನರೆದಿದ್ದರು, ದೇಶದ ರಾಜಕೀಯ ಮುಖಂಡರು, ಪ್ರಧಾನಿಗಳು ಸೇರಿದಂತೆ ವಿವಿಧ ರಾಜಕೀಯ ನಾಯಕರು ಎಲ್ಲರದ್ದೂ ಒಂದೇ ಘೋಷವಾಕ್ಯ ಅಟಲ್ ಜಿ ಅಮರ್ ರಹೇ..ಅಟಲ್ ಜಿ ಜಿಂದಾಬಾದ್...ಹೌದು ಇದೆಲ್ಲವೂ ದೆಹಲಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆಯಲ್ಲಿ ಕಂಡುಬಂದದ್ದು.

ದೆಹಲಿಯ ವಿಜಯ್ ಘಾಟ್ ಬಳಿಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರ ಸಾವಿರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ  ಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೂ ತಮ್ಮ ನಾಯಕನ ಪಾರ್ಥಿವ ಶರೀದ ಜೊತೆ ಜೊತೆಗೆ ಕಾಲ್ನಡಿಗೆಯಲ್ಲಿಯೇ ತೆರಳುತ್ತಿದ್ದಾರೆ.

ಬಿಜೆಪಿ ಕಚೇರಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಸ್ಮೃತಿ ಸ್ಥಳದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದ್ದು, ಮೆರವಣಿಗೆಯಲ್ಲಿ ಕಿಕ್ಕಿರಿದು ಜನ ಸೇರಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ನೆಚ್ಚಿನ ನಾಯಕನ ಯಾತ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

vijay gha atal bihari vajpayee ನಾಯಕ ರಾಜಕೀಯ