ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಾಜಪೇಯಿಗೆ ಗಣ್ಯರ ಅಂತಿಮ ನಮನ


17-08-2018 260

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಪಾರ್ಥಿವ ಶರೀರ ದೆಹಲಿಯ ಕೃಷ್ಣ ಮೆನನ್ ಮಾರ್ಗ್-ಇಂಡಿಯಾ ಗೇಟ್-ತಿಲಕ್ ಮಾರ್ಗ್-ದಿನ್ ದಯಾಳ್ ಉಪಾಧ್ಯಾಯ ಮಾರ್ಗದ ಮೂಲಕ ಈಗಾಗಲೇ ಬಿಜೆಪಿ ಪ್ರಧಾನ ಕಚೇರಿ ತಲುಪಿದ್ದು, ಸಾರ್ವಜನಿಕರ ಮತ್ತು ಕಾರ್ಯಕರ್ತರ ದರ್ಶನಕ್ಕೆ ಮಧ್ಯಾಹ್ನ ಒಂದು ಗಂಟೆಯವರೆಗೆ ಅವಕಾಶ ನೀಡಲಾಗಿದೆ. ನಂತರ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ನೇತಾಜಿ ಸುಭಾಷ್ ಚಂದ್ರ ಮಾರ್ಗವಾಗಿ ಸ್ಮೃತಿ ಸ್ಥಳ ತಲುಪಲಿದೆ ವಾಜಪೇಯಿ ಅವರ ಪಾರ್ಥಿವ ಶರೀರ. ವಿಜಯ್ ಘಾಟ್ ನಲ್ಲಿರುವ ಸ್ಮೃತಿಯಲ್ಲಿ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಗಣ್ಯರು ಅಂತಿನ ನಮನ ಸಲ್ಲಿಸಿದರು.


ಒಂದು ಕಮೆಂಟನ್ನು ಬಿಡಿ