‘ವಾಜಪೇಯಿ ಆರೋಗ್ಯ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’


16-08-2018 277

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ, ಸಂಸದ ಪ್ರಲ್ಹಾದ್ ಜೋಶಿ ಅವರು, ವಾಜಪೇಯಿ ಅವರ ಅರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಲೋಕಸಭೆಯಲ್ಲಿ‌ ಒಂದು ಅವಧಿ ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿತ್ತು, ಲೋಕಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಿದಾಗ ಬೆನ್ನುತಟ್ಟಿದ್ದರು. ವಾಜಪೇಯಿ ಪಾಂಡಿತ್ಯದ ಮೇರು ಪರ್ವತ ಎಂದು ಹೇಳಿದರು.

ಹುಬ್ಬಳ್ಳಿಗೂ ಹಲವು ಬಾರಿ ಬಂದು ಹೋಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ನೆಲದ ಮೇಲೆ ಕೂತು ಅವರ ಭಾಷಣ ಕೇಳಿದ್ದೇನೆ ಎಂದು ನೆನಪಿಸಿಕೊಂಡರು. ಅಲ್ಲದೇ ಆರೋಗ್ಯ ಸುಧಾರಿಸಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.


ಒಂದು ಕಮೆಂಟನ್ನು ಬಿಡಿ