ಶಿಕ್ಷಕರೊಬ್ಬರ ದೌರ್ಜನ್ಯಕ್ಕೆ ಬಡವನ ಮನೆ ಧ್ವಂಸ


16-08-2018 208

ದೊಡ್ಡಬಳ್ಳಾಪುರ:  ಶಿಕ್ಷಕರೊಬ್ಬರ ದೌರ್ಜನ್ಯಕ್ಕೆ ಬಡವನ ಮನೆ ಧ್ವಂಸವಾಗಿದೆ. ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ತಾಲ್ಲೂಕಿನ ಸ್ಥಳೀಯ ನಿವಾಸಿ ಮಗುಶೆಟ್ಟಿ ಎಂಬುವವರ ಮನೆಯನ್ನು ಉರುಳಿಸಿದ್ದಾರೆ. ನಿನ್ನೆ ರಾತ್ರಿ ಏಕಾಏಕಿ ಜೆಸಿಬಿ ತರಿಸಿ ಮನೆ ಕಡವಿದ ಶಿಕ್ಷಕ, ಮಾನವೀಯತೆ ಮರೆತು ದೌರ್ಜನ್ಯ ಎಸಗಿದ್ದಾರೆ. ದೊಡ್ಡಬಳ್ಳಾಪುರ ನಗರದ ಶಾಂತಿನಗರ 7ನೇ ಕ್ರಾಸ್ ನಲ್ಲಿರು ಮಗುಶೆಟ್ಟಿಯವರ ಮನೆ ಜಾಗವನ್ನು ತನ್ನದೆಂದು ಹೇಳುತ್ತಿರುವ ಶಿಕ್ಷಕ ಈ ರೀತಿ ಮಾಡಿದ್ದಾರೆ.

ಯಲಹಂಕ ತಾಲ್ಲೂಕಿನ ಬ್ಯಾತ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ರಾಜೇಂದ್ರ ಪ್ರಸಾದ್ ಸರ್ಕಾರಿ ರಸ್ತೆಯನ್ನು ಅತಿಕ್ರಮಿಸಿ ಮಗುಶೆಟ್ಟಿ ಮನೆಯನ್ನು ಧ್ವಂಸ ಮಾಡಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Teacher JCB ಸರ್ಕಾರಿ ಶಾಲೆ ದೌರ್ಜನ್ಯ