ಬೀದರ್ ನಲ್ಲಿ ರಾಹುಲ್ ಗಾಂಧಿ ‘ಜನಧ್ವನಿ’


13-08-2018 209

ಬೀದರ್: ಲೋಕಸಭಾ ಮತ್ತು ಸ್ಥಳೀಯ ಚುನಾವಣೆ ಹಿನ್ನೆಲೆ ಇಂದು ಗಡಿ ಜಿಲ್ಲೆ ಬೀದರ್ ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜನಧ್ವನಿ ಹಾಗೂ ಅಭಿನಂದನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಅಭಿನಂಧನಾ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ಮುಕ್ಕಾಲು ಕೆಜಿಯ ಸ್ಥಾವರ ಲಿಂಗವನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಿದ್ದಾಗ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಜೊರಾಗಿತ್ತು. ಹೀಗಾಗಿ ಜಿಲ್ಲೆಗೆ ಬಂದಾಗ ಅವರಿಗೆ ಲಿಂಗಾಯತ ಹೋರಾಟದ ದ್ಯೋತಕವಾದ ಇಷ್ಟಲಿಂಗ ನೀಡಲಾಗಿತ್ತು. ಆದರೆ ಅದಕ್ಕೆ ಕೌಂಟರ್ ನೀಡುವ ರೀತಿಯಲ್ಲಿ ಹಿಂದಿನಿಂದಲೂ ವೀರಶೈವ-ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸುತ್ತಿರುವ ಖಂಡ್ರೆ ಅದಕ್ಕಾಗಿ ಅವರಿಗೆ ಸ್ಥಾವರ ಲಿಂಗವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rahul Gandhi AICC ಇಷ್ಟಲಿಂಗ ಸ್ಥಾವರ ಲಿಂಗ