ಬಿಜೆಪಿಯವರು ಮತ ಬೇಟೆಗೆ ಮಾತ್ರ ರಾಜ್ಯಕ್ಕೆ ಬರ್ತಾರೆ: ಸಾರಾ ಗೋವಿಂದು


11-08-2018 301

ಬೆಂಗಳೂರು: ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಕನ್ನಡ ಚಲನ ಚಿತ್ರಗಳ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸಾಥ್ ನೀಡಿದ್ದಾರೆ. ಇಂದಿನಿಂದ ನಗರದ ಫ್ರೀಡಂ ಪಾರ್ಕಿನಲ್ಲಿ ಮಹದಾಯಿ ನದಿ ನೀರಿಗಾಗಿ ಹೋರಾಟ ಹಿನ್ನೆಲೆ ಪ್ರತಿಕ್ರಿಯಿಸಿರುವ ಅವರು, ಮಹದಾಯಿ ನದಿ ನೀರು ವಿಚಾರವಾಗಿ ಈ  ಹಿಂದಿನ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ 15 ಬಾರಿ ಪತ್ರ ಬರೆದಿದ್ದರು. ಆದರೆ, ವಿರೋಧ ಪಕ್ಷದವರೇ ಆ ಹೋರಾಟಗಳನ್ನೆಲ್ಲ ಹಾಳು ಮಾಡಿದರು. ಬಿಜೆಪಿಯವರು ಕೇವಲ ಮತ ಬೇಟೆಗೆ ರಾಜ್ಯಕ್ಕೆ ಬರ್ತಾರೆ. ಆದರೆ, ರಾಜ್ಯದಲ್ಲಿನ ನೀರಿನ ಸಮಸ್ಯೆ, ರೈತರ ಸಮಸ್ಯೆ ಬಗ್ಗೆ ಮಾತನಾಡೋದಿಲ್ಲ ಎಂದು ಟೀಕೆ ಮಾಡಿದ್ದಾರೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರರಂಗ ಕೂಡ ಮಹದಾಯಿ ಹೋರಾಟದಲ್ಲಿ ಯಾವತ್ತೂ ಬೆಂಬಲ ನೀಡಲಿದೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Sa Ra Govindu Mahadayi ಕೇಂದ್ರ ಸರ್ಕಾರ ಚಿತ್ರರಂಗ