ಇಬ್ಬರ ಬಳಿ 4 ಕೆಜಿ ಗಾಂಜಾ: ಇಬ್ಬರೂ ಅರೆಸ್ಟ್


03-08-2018 235

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು 4 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೋಲಾರದ ರಹಮತ್‍ನಗರದ ಅಸ್ಲಂ (36)ಹಾಗೂ ಇಮ್ರಾನ್ ಖಾನ್ (28)ಬಂಧಿತ ಆರೋಪಿಯಾಗಳಾಗಿದ್ದಾರೆ. ಕಲಾಸಿಪಾಳ್ಯದ ಬಂಬೂ ಬಜಾರ್‍ ನ ಜಟಕಾ ಸ್ಟಾಂಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಲಂನಿಂದ 80 ಸಾವಿರ ಮೌಲ್ಯದ 2 ಕೆಜಿ ಗಾಂಜಾ, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಇಮ್ರಾನ್ ಖಾನ್‍ನಿಂದ 2 ಕೆಜಿ ಗಾಂಜಾ ಮೊಬೈಕ್ ಸೇರಿ 1ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೇರೆ ಕಡೆಗಳಿಂದ ಗಾಂಜಾ ಖರೀದಿಸಿಕೊಂಡು ಬಂದು ಅದನ್ನು ಚಿಕ್ಕ ಪ್ಯಾಕೆಟ್‍ಗಳಾಗಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡಿರುವ ಗಾಂಜಾದ ಮೌಲ್ಯ 80 ಸಾವಿರ ಎಂದು ಅಂದಾಜಿಸಲಾಗಿದೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ganja Crime ಮೊಬೈಲ್ ಖಚಿತ ಮಾಹಿತಿ