ಮಾನವೀಯತೆ ಮೆರೆದ ಸಚಿವ ಸಾ.ರಾ.ಮಹೇಶ್


03-08-2018 283

ಮಡಿಕೇರಿ: ಕುಶಾಲನಗರ ಸಮೀಪದ ಆನೆ‌ಕಾಡು ಬಳಿ ಜಿಂಕೆಯೊಂದಕ್ಕೆ ತಮಿಳುನಾಡಿನ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಇದೇ ಮಾರ್ಗವಾಗಿ ಬರುತ್ತಿದ್ದ ರಾಜ್ಯದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾನವೀಯತೆ ಮೆರೆದಿದ್ದಾರೆ. ಮಡಿಕೇರಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಆನೆಕಾಡು ಬಳಿ ರಸ್ತೆ ಬದಿಯಲ್ಲಿ ಗಾಯಗೊಂಡ ಬಿದ್ದಿದ್ದ ಜಿಂಕೆಯನ್ನು ಗಮನಿಸಿ ಕಾರು ನಿಲ್ಲಿಸಿ ಗಾಯಗೊಂಡ ಜಿಂಕೆಗೆ ನೀರು ಕುಡಿಸಿ ಮಾನವೀಯತೆ ಮೆರೆದಿದ್ದಾರೆ. ಕುಶಾಲನಗರ ಮಾರ್ಗವಾಗಿ ಮಡಿಕೇರಿಯಲ್ಲಿ ಆಧಿಕಾರಿಗಳ ಸಭೆಗೆ ಹೋಗುವಾಗ ಈ ಘಟನೆ ನಡೆದಿದೆ. ಕೂಡಲೆ ಪರಿಶೀಲನೆ ನಡೆಸಿ ಸ್ಥಳದಲ್ಲೇ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಸಚಿವ ಸಾ.ರಾ.ಮಹೇಶ್.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Sara Mahesh Deer ಕುಶಾಲನಗರ ಮಾನವೀಯ