ಪ್ರಧಾನಿ ಮೋದಿ ಹೆಸರಲ್ಲಿ ವೃದ್ಧ ದಂಪತಿಗೆ ಮೋಸ!


01-08-2018 363

ಬೆಂಗಳೂರು: ವಿಜಯನಗರದ ಹೊಸಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ವೃದ್ಧ ದಂಪತಿಯನ್ನು ವಂಚನೆ ನಡೆಸಿರುವ ದುಷ್ಕರ್ಮಿಗಳು ಪರಾರಿಯಾಗಿರುವ ಕೃತ್ಯ ಬೆಳಕಿಗೆ ಬಂದಿದೆ.

ಹೊಸಹಳ್ಳಿಯ ವೃದ್ಧ ನಾಗೇಶ್ವರ ರಾವ್ ದಂಪತಿಯಿದ್ದ ಮನೆಗೆ ಬಂದ ಇಬ್ಬರು ಖದೀಮರು ಕೆಇಬಿ ಎಂಜಿನಿಯರ್ ಗಳು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹಿರಿಯ ನಾಗರಿಕರಿಗೆ ಉಚಿತವಾಗಿ ಲೈಟ್‍ಗಳನ್ನು ಕೊಡುತ್ತಿದ್ದಾರೆ. ಮೊದಲಿಗೆ 90 ಲೈಟ್‍ಗಳನ್ನು ಕೊಟ್ಟಿದ್ದಾರೆ. ಅದಕ್ಕಾಗಿ 9,000 ರೂ. ಕೊಡಿ ಸ್ಕ್ಯಾನ್ ಮಾಡಿ ವಾಪಾಸ್ ಕೊಡಲಾಗುವುದು ಎಂದು ಹೇಳಿದ್ದಾರೆ. ಅಧಿಕಾರಿಗಳೆಂದು ನಂಬಿ ಹಣ ನೀಡಿದ್ದು ಅದನ್ನು ಪಡೆದು ಪಡೆದು ಖದೀಮರು ಆಧಾರ್ ಕಾರ್ಡ್ ತೆಗೆದುಕೊಂಡು ಬರಲು ಒಳಗೆ ಕಳುಹಿಸಿ ಬರುವಷ್ಟರಲ್ಲಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ.

ಖದೀಮರು ಮೋಸ ಮಾಡಿ ಓಡಿ ಹೋಗುತ್ತಿರುವ ದೃಶಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರದ ಸುತ್ತಮುತ್ತ ಇತಂಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇಲ್ಲಿನ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಜಯನಗರ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೋಸಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

cheating KEB ನರೇಂದ್ರ ಮೋದಿ ಲೈಟ್‍